HEALTH TIPS

140 ಕೋಟಿ ಭಾರತೀಯರ ಮೇಲೆ ವಿಶ್ವಾಸವಿದೆ, ಕೋವಿಡ್ ಕಾಲದಂತೆಯೇ LPG ಬಿಕ್ಕಟ್ಟನ್ನೂ ಜಯಿಸುತ್ತೇವೆ: ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಉಂಟಾಗಿರುವ LPG ಸಂಬಂಧಿತ ಕಳವಳಗಳನ್ನು ಭಾರತವು ಕೋವಿಡ್ ಸಾಂಕ್ರಾಮಿಕ ಕಾಲದಂತೆ ಯಶಸ್ವಿಯಾಗಿ ಎದುರಿಸಿ ನಿವಾರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎನ್‌ಎಕ್ಸ್ಟಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅಡಚಣೆಗಳು ಭಾರತೀಯ ನಾಗರಿಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಬಹು ರಂಗಗಳಲ್ಲಿ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.

"ಕೋವಿಡ್ ಕಾಲದಂತೆಯೇ ಈ ಬಿಕ್ಕಟ್ಟನ್ನೂ ನಾವು ನಿವಾರಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗೆ 140 ಕೋಟಿ ಭಾರತೀಯರ ಮೇಲೆ ಇದೆ. ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಯುದ್ಧಗಳಿಂದಾಗಿ ನಾಗರಿಕರು ಯಾವುದೇ ಸಮಸ್ಯೆಗಳನ್ನು ಎದುರಿಸಬಾರದು ಎಂಬುದು ನಮ್ಮ ಸಂಕಲ್ಪ," ಎಂದು ಮೋದಿ ಹೇಳಿದರು.

LPG ಲಭ್ಯತೆಯ ಕುರಿತು ಅನಗತ್ಯ ಭೀತಿ ಮೂಡಿಸುವ ಪ್ರಯತ್ನಗಳ ವಿರುದ್ಧ ಪ್ರಧಾನಿ ಎಚ್ಚರಿಕೆ ನೀಡಿದರು. ಅಕ್ರಮ ಮಾರಾಟ ಹಾಗೂ ಅತಿ ಸಂಗ್ರಹಣೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುವ ಶಕ್ತಿಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಮೇಲ್ವಿಚಾರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಪ್ರಧಾನಿ ಒತ್ತಾಯಿಸಿದರು.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಜಗತ್ತಿನ ಅನೇಕ ದೇಶಗಳ ಮೇಲೆ ಪರಿಣಾಮ ಬೀರಿದ್ದು, ಇಂಧನ ಕ್ಷೇತ್ರದಲ್ಲಿ ಕಳವಳವನ್ನುಂಟು ಮಾಡಿದೆ ಎಂದು ಅವರು ಉಲ್ಲೇಖಿಸಿದರು. ಆದರೆ, ಭಾರತ ತನ್ನ ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಾಗತಿಕ ನಾಯಕರೊಂದಿಗೆ ಭಾರತ ನಿರಂತರ ಸಂಪರ್ಕದಲ್ಲಿದ್ದು, ಪೂರೈಕೆ ಸರಪಳಿಯಲ್ಲಿ ಉಂಟಾಗಿರುವ ಅಡಚಣೆಗಳನ್ನು ನಿವಾರಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

"ಭಾರತದ ದೀರ್ಘಕಾಲೀನ ಇಂಧನ ಕಾರ್ಯತಂತ್ರದ ಕುರಿತು ಮಾತನಾಡಿದ ಅವರು, ಪೆಟ್ರೋಲಿಯಂ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕಳೆದ ದಶಕದಲ್ಲಿ ಎಥೆನಾಲ್ ಮಿಶ್ರಣ ವಿಸ್ತರಣೆ ಹಾಗೂ ಜೈವಿಕ ಇಂಧನಗಳ ಉತ್ತೇಜನಕ್ಕೆ ಸರ್ಕಾರ ಒತ್ತು ನೀಡಿದೆ. 2014ರ ಮೊದಲು ದೇಶದಲ್ಲಿ ಎಥೆನಾಲ್ ಮಿಶ್ರಣ ಸಾಮರ್ಥ್ಯ ಕೇವಲ 1ರಿಂದ 1.5 ಶೇಕಡಾವರೆಗೆ ಮಾತ್ರ ಇತ್ತು. ಇಂದು ಪೆಟ್ರೋಲ್ ನಲ್ಲಿ ಸುಮಾರು 20 ಶೇಕಡಾ ಎಥೆನಾಲ್ ಮಿಶ್ರಣವನ್ನು ಮಾಡುತ್ತಿದ್ದೇವೆ," ಎಂದು ಪ್ರಧಾನಿ ಹೇಳಿದರು.

ಜಾಗತಿಕ ಬಿಕ್ಕಟ್ಟುಗಳನ್ನು ಎದುರಿಸಲು ಭಾರತ ತನ್ನ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳು ಹಾಗೂ ಇಂಧನ ಮೂಲಸೌಕರ್ಯವನ್ನು ವಿಸ್ತರಿಸಿದೆ. ಭಾರತದ ಕಾರ್ಯತಂತ್ರದ ಪೆಟ್ರೋಲಿಯಂ ನಿಕ್ಷೇಪಗಳು ಈಗ 50 ಲಕ್ಷ ಟನ್ ಗಳನ್ನು ಮೀರಿದ್ದು, LPG ಸಂಪರ್ಕಗಳ ಸಂಖ್ಯೆ 2014ರಲ್ಲಿ 14 ಕೋಟಿಯಿಂದ ಈಗ 33 ಕೋಟಿಗೆ ಏರಿಕೆಯಾಗಿದೆ ಎಂದು ಮೋದಿ ವಿವರಿಸಿದರು.

"ಕಳೆದ ದಶಕದಲ್ಲಿ ದೇಶದ ಅನಿಲ ಪೈಪ್ಲೈನ್ ಜಾಲ, LNG ಟರ್ಮಿನಲ್ ಗಳು ಮತ್ತು LPG ವಿತರಣಾ ಮೂಲಸೌಕರ್ಯವು ಗಮನಾರ್ಹವಾಗಿ ವಿಸ್ತರಿಸಲಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತ ಸ್ಥಿರವಾಗಿ ಮುಂದುವರಿಯುತ್ತಿದ್ದು, ಜಾಗತಿಕ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಉಳಿದಿದೆ. ಜಗತ್ತು ಕಠಿಣ ಹಂತವನ್ನು ಎದುರಿಸುತ್ತಿದೆ. ಆದರೆ ಭಾರತವು ವೇಗವಾಗಿ ಹಾಗೂ ಸ್ಥಿರವಾಗಿ ಮುಂದುವರಿಯುತ್ತಿದೆ," ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries