HEALTH TIPS

ಬಿಹಾರ ಸಿಎಂ ನಿತೀಶ್ ಪುತ್ರನ ರಾಜಕೀಯ ಪ್ರವೇಶ ಖಚಿತ: ಶೀಘ್ರ ಘೋಷಣೆ

ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ ನಿಶಾಂತ್ ರಾಜಕೀಯ ಪ್ರವೇಶ ಖಚಿತಗೊಂಡಿದ್ದು, ಅದನ್ನು ಔಪಚಾರಿಕವಾಗಿ ಜೆಡಿಯು ಘೋಷಣೆ ಮಾಡಲಿದೆ ಎಂದು ಸಚಿವ ಶರ್ವಣ್ ಕುಮಾರ್ ಮಂಗಳವಾರ ಹೇಳಿದ್ದಾರೆ.

ನಿಶಾಂತ್ ಅವರಿಗೆ ದೊಡ್ಡ ಜವಾಬ್ದಾರಿ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

'ಇದು ಈಗ ಖಚಿತ ಹಾಗೂ ಅಂತಿಮಗೊಂಡಿದೆ, ನಿಶಾಂತ್ ಕುಮಾರ್ ಸಕ್ರೀಯ ರಾಜಕಾರಣಕ್ಕೆ ಪ್ರವೇಶಿಸಲಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಪಕ್ಷವೇ ಅದನ್ನು ಘೋಷಿಸಲಿದೆ. ನಿಶಾಂತ್ ರಾಜಕೀಯಕ್ಕೆ ಬರಬೇಕು ಎಂದು ಹಲವು ವರ್ಷಗಳಿಂದ ಕಾರ್ಯಕರ್ತರು ಒತ್ತಾಯಿಸುತ್ತಿದ್ದರು. ಹೋಳಿ ಹಬ್ಬಕ್ಕೆ ಮುನ್ನವೇ ಈ ನಿರ್ಧಾರ ಹೊರಬಿದ್ದಿರುವುದು ಪಕ್ಷದ ಕಾರ್ಯಕರ್ತರಲ್ಲಿ ಮತ್ತು ಬೆಂಬಲಿಗರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ಅವರಿಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸಲಾಗುವುದು, ಯಾವ ಜವಾಬ್ದಾರಿ ಎನ್ನುವುದು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ ಎಂದರು.

ನಿಶಾಂತ್ ಕುಮಾರ್ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗುವುದೇ ಎನ್ನುವ ಪ್ರಶ್ನೆಗೆ 'ಎನೂ ಬೇಕಾದರೂ ಆಗಬಹುದು' ಎಂದು ಉತ್ತರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries