HEALTH TIPS

ಉಗ್ರರನ್ನು ಗುರಿಯಾಗಿಸಿಕೊಂಡು ಇರಾಕ್‌ನ ತೈಲಾಗಾರಗಳ ಮೇಲೆ ಡ್ರೋನ್‌ ದಾಳಿ

ಬಾಗ್ದಾದ್: ಶುಕ್ರವಾರ ಉಗ್ರರನ್ನು ಗುರಿಯಾಗಿಸಿಕೊಂಡು ದಕ್ಷಿಣ ಇರಾಕ್‌ನ ವಿಮಾನ ನಿಲ್ದಾಣ ಮತ್ತು ತೈಲ ಘಟಕಗಳ ಮೇಲೆ ಇರಾನ್ ದಾಳಿ ಮಾಡಿದೆ. ಮುಖ್ಯವಾಗಿ ಇರಾನ್ ಮೂಲದ ಕುರ್ದಿಶ್ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ಮತ್ತು ಸ್ಫೋಟಗಳು ನಡೆದವು ಎಂದು ವರದಿ ತಿಳಿಸಿದೆ.

ಇರಾಕ್‌ನ ದಕ್ಷಿಣದ ಬಸ್ರಾ ಪ್ರಾಂತ್ಯದಲ್ಲಿ ಬಸ್ರಾ ವಿಮಾನ ನಿಲ್ದಾಣದ ಕಾರ್ಗೊ ಟರ್ಮಿನಲ್‌ಗೆ ಡ್ರೋನ್ ಅಪ್ಪಳಿಸಿತು ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೆರಡು ಡ್ರೋನ್ ಬುರ್ಜೇಸಿಯಾ ತೈಲ ಸಂಕೀರ್ಣದಲ್ಲಿರುವ ಅಮೆರಿಕ ಕಂಪನಿಗೆ ಡಿಕ್ಕಿ ಹೊಡೆದಿವೆ. ನಾಲ್ಕನೆಯದು ರುಮೈಲಾ ತೈಲ ಘಟಕಕ್ಕೆ ಡಿಕ್ಕಿ ಹೊಡೆಯಿತು ಎಂದು ಅಧಿಕಾರಿ ಹೇಳಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಪರೋಕ್ಷ ಯುದ್ಧಭೂಮಿಯಾಗಿರುವ ಇರಾಕ್, ಪಶ್ಚಿಮ ಏಷ್ಯಾವನ್ನು ಆವರಿಸಿರುವ ಯುದ್ಧದಲ್ಲಿ ಪಾಲ್ಗೊಳ್ಳಲು ಬಯಸುವುದಿಲ್ಲ ಎಂದು ಹೇಳಿತ್ತು. ಆದರೆ, ಅದನ್ನು ಎಳೆದು ತರಲಾಗಿದೆ ಎಂದು ವರದಿ ತಿಳಿಸಿದೆ.

ಅಮೆರಿಕದ ಪಡೆಗಳಿಗೆ ಆತಿಥ್ಯ ವಹಿಸಿರುವ ಉತ್ತರದ ಸ್ವಾಯತ್ತ ಕುರ್ದಿಸ್ತಾನ್ ಪ್ರದೇಶವು ಇಂದಿನ ದಾಳಿಯ ಪ್ರಮುಖ ಗುರಿಯಾಗಿದೆ.

ಕುರ್ದಿಸ್ತಾನ್‌ನ ರಾಜಧಾನಿ ಎರ್ಬಿಲ್‌ನಲ್ಲಿರುವ ವಿಮಾನ ನಿಲ್ದಾಣದ ಬಳಿ ಶುಕ್ರವಾರ ಸ್ಫೋಟಗಳು ನಡೆದಿದ್ದು, ಅಲ್ಲಿ ಕೆಲ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ.

ದೋಹುಕ್ ಪ್ರಾಂತ್ಯದಲ್ಲಿ ಗುರುವಾರ ನಡೆದ ದಾಳಿಯ ನಂತರ ಅಮೆರಿಕದ ಸಂಸ್ಥೆ ಎಚ್‌ಕೆಎನ್ ಎನರ್ಜಿ ನಿರ್ವಹಿಸುವ ತೈಲ ಸಂಸ್ಕರಣಾ ಘಟಕದಲ್ಲಿ ತೈಲ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕುರ್ದಿಸ್ತಾನ್‌ನ ನೈಸರ್ಗಿಕ ಸಂಪನ್ಮೂಲ ಸಚಿವಾಲಯ ಶುಕ್ರವಾರ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries