HEALTH TIPS

ಭಾಸ್ಕರ ನಗರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕುಂಬಳೆ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂಗವಾಗಿ ಕುಂಬಳೆ ಭಾಸ್ಕರ ನಗರ ನವೋದಯ ಗ್ರಂಥಾಲಯ ಮತ್ತು ವಾಚನಾಲಯ, ನವೋದಯ ಫ್ರೆಂಡ್ಸ್ ಕ್ಲಬ್, ನವೋದಯ ವುಮೆನ್ಸ್ ವಿಂಗ್ ಘಟಕಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು. ರಾಷ್ಟ್ರೀಯ ಮಾಯಾಜಾಲ ಪ್ರಶಸ್ತಿ ವಿಜೇತೆ ಪ್ರೊ.ಮುಬೀನ ಫರ್ವೀನ್ ತಾಜ್ ಮಹಿಳಾ ದಿನಾಚರಣೆಯ ಥೀಮ್ ಬಣ್ಣಗಳ ಮಹತ್ವವನ್ನು ವಿವರಿಸಿದರು. ಅಂತಾರಾಷ್ಟ್ರೀಯ ಜಾದು ಪ್ರಶಸ್ತಿ ವಿಜೇತೆ ಕಲಾಸೃಷ್ಠಿ ತಂಡದ ನಿರ್ದೇಶಕಿ ಶಮಾ ಪರ್ವೀನ್ ತಾಜ್ ಸಮಾನತೆ ಮತ್ತು ಬಾಲಕಿಯರ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಬೆಂಬಲದ ಮಹತ್ವ ಎಂದು ತಿಳಿಸಿದರು. ಇದೇ ವೇಳೆ ಪ್ರೊ. ಮುಬೀನ ಪರ್ವೀನ್ ತಾಜ್ ಮತ್ತು ಶಮಾ ಪರ್ವೀನ್ ತಾಜ್‍ರನ್ನು ನವೋದಯ ಮಹಿಳಾ ಘಟಕ ವತಿಯಿಂದ ಸನ್ಮಾನಿಸಲಾಯಿತು. 

ಗ್ರಂಥಾಲಯ ಅಧ್ಯಕ್ಷ ಅನೂಪ್ ರಾಜ್, ಕಾರ್ಯದರ್ಶಿ ಪೂಜಾ ರತೀಶ್, ಕುಂಬಳೆ ಗ್ರಾ.ಪಂ. ಉಪಾಧ್ಯಕ್ಷೆ ಬಲ್ಕೀಸ್, ನವೋದಯ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ನವೀನ್, ಕಾರ್ಯದರ್ಶಿ ಅನ್ನಪೂರ್ಣ, ಗೀತಾ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಡಿಸೋಜ ಉಪಸ್ಥಿತರಿದ್ದರು. ಮಹಿಳೆಯರಿಗಾಗಿ ಇಂದ್ರಜಾಲ ಕಾರ್ಯಕ್ರಮದಲ್ಲಿ ಜಾದು ಪ್ರದರ್ಶನ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries