HEALTH TIPS

ಕೇಂದ್ರ ಸರ್ಕಾರದ ಯೋಜನೆಗಳನ್ನು ಕಮ್ಯೂನಿಸ್ಟ್ ಸರ್ಕಾರದ್ದೆಂದು ಬಿಂಬಿಸಲಾಗುತ್ತಿದೆ- ನಳಿನ್ ಕುಮಾರ್ ಕಟೀಲ್

ಬದಿಯಡ್ಕ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ವಿಭಾಗದವರಿಗೆ ಸಮಾನವಾದ ರೀತಿಯಲ್ಲಿ ಯೋಜನೆಗಳನ್ನು ತಲುಪಿಸುವಾಗ ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಕೇಂದ್ರ ಯೋಜನೆಗಳನ್ನು ಅನುಷ್ಠಾನಗೊಳಿಸದೆ, ಯೋಜನೆಗಳು ತಮ್ಮದೆಂದು ಬಿಂಬಿಸುವ ದುಷ್ಟ ಆಡಳಿತ ನಡೆಸುತ್ತಿರುವುದಾಗಿ ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದರು. 

ಕುಂಬ್ಡಾಜೆ ಪಂಚಾಯತಿ ಮೈಲ್ತೊಟ್ಟಿ ಎಸ್‍ಸಿ ಕಾಲನಿಯಲ್ಲಿ ಬುಧವಾರ ನಡೆದ ಕುಟುಂಬ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಬಿಜೆಪಿಯು ಎಲ್ಲರ ಕ್ಷೇಮಕ್ಕಾಗಿ ಎಲ್ಲಾ ಪಂಗಡದವರಿಗೆ ಆದ್ಯತೆ ನೀಡುವ ಮೂಲಕ ಆಡಳಿತ ನಡೆಸುತ್ತಿದ್ದು, ಕಾಸರಗೋಡು ಅಭಿವೃದ್ಧಿ ಹೊಂದಬೇಕಾದರೆ ಕಾಸರಗೋಡಿನಲ್ಲೂ ಬಿಜೆಪಿ ಶಾಸಕರು ಬರಬೇಕು ಎಂದು ಅವರು ಕರೆನೀಡಿದರು. 


ಕಾಲನಿಯ ಆನಂದ ಅಧ್ಯಕ್ಷತೆ ವಹಿಸಿದ್ದರು. ಕಲ್ಲಿಕೋಟೆ ವಲಯ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್, ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ರಾಜ್ಯ ಸಮಿತಿ ಸದಸ್ಯ ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಕುಂಬ್ಡಾಜೆ ಬಿಜೆಪಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ, ಶ್ರೀಧರ ಬೆಳ್ಳೂರು, ಪ್ರಿಯಾಂಕ ಎ.ಸಿ, ಕೊರಗಪ್ಪ ಬೆಳ್ಳಿಗೆ, ಹರೀಶ್ ಕುಣಿಕುಳ್ಳಾಯ, ಜಯಪ್ರಕಾಶ್, ರಘು ಮಾಚಾವು, ರಾಮ ಭಾಗವಹಿಸಿದ್ದರು. ರಾಜೇಶ್ ಶೆಟ್ಟಿ ಸ್ವಾಗತಿಸಿ, ಪಂಚಾಯತಿ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಭಂಡಾರಿ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries