HEALTH TIPS

ಇರಾನ್ ವಿರುದ್ಧ ತೊಡೆತಟ್ಟಿದ ಬ್ರಿಟನ್: ಯುದ್ಧಕ್ಕೆ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆ

 ಲಂಡನ್: ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ತೀವ್ರಗೊಳ್ಳುತ್ತಿರುವ ನಡುವೆಯೇ ಅಮೆರಿಕ ಬೆಂಬಲವಾಗಿ ಬ್ರಿಟನ್ ಸಹ ರಣಕಣ ಪ್ರವೇಶಿಸಿದೆ. ಹಿಂದೂಮಹಾಸಾಗರದ ದ್ವೀಪದಲ್ಲಿನ ಅಮರಿಕ-ಬ್ರಿಟನ್ ಮಿಲಿಟರಿ ನೆಲೆ ಮೇಲೆ ಇರಾನ್ ದಾಳಿಯ ನಂತರ ಬ್ರಿಟನ್ ನೇರ ಯುದ್ಧಕ್ಕಿಳಿಯುವ ಸೂಚನೆ ನೀಡಿದೆ. 


ಇದಕ್ಕೆ ಇಂಬು ನೀಡುವಂತೆ, ಟೊಮಾಹಾಕ್*ಕ್ರೂಸ್ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾದ ಬ್ರಿಟಿಷ್ ನೌಕಾಪಡೆಯ ಎಚ್‌ಎಂಎಸ್ ಆನ್ಸನ್ ಜಲಾಂತರ್ಗಾಮಿ ನೌಕೆಯನ್ನು ಅರಬ್ಬೀ ಸಮುದ್ರದಲ್ಲಿ ನಿಯೋಜಿಸಲಾಗಿದೆ ಎಂದು ವರದಿಯಾಗಿದೆ.

ಪರಮಾಣು ಚಾಲಿತ ಜಲಾಂತರ್ಗಾಮಿ ಎಚ್‌ಎಂಎಸ್ ಅನ್ಸನ್ ಈ ತಿಂಗಳ ಆರಂಭದಲ್ಲಿ ಪರ್ತ್‌ನಿಂದ ಹೊರಟು ಸುಮಾರು 5,500 ಮೈಲುಗಳಷ್ಟು ಪ್ರಯಾಣಿಸಿ ಈ ಪ್ರದೇಶಕ್ಕೆ ಆಗಮಿಸಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಡೈಲಿ ಮೇಲ್ ವರದಿ ಮಾಡಿದೆ.

ಟೊಮಾಹಾಕ್ ಬ್ಲಾಕ್ Iಗಿ ಕ್ಷಿಪಣಿಗಳು ಮತ್ತು ಸ್ಪಿಯರ್‌ಫಿಶ್ ಹೆವಿವೇಯ್ಟ್ ಟಾರ್ಪಿಡೊಗಳಿಂದ ಶಸ್ತ್ರಸಜ್ಜಿತವಾದ ಬ್ರಿಟಿಷ್ ಜಲಾಂತರ್ಗಾಮಿ ನೌಕೆಯು 1,000 ಮೈಲುಗಳಷ್ಟು(1,600 ಕಿಮೀ) ವ್ಯಾಪ್ತಿಯ ಕ್ಷಿಪಣಿಗಳನ್ನು ಹಾರಿಸಬಲ್ಲದು. ಬ್ರಿಟನ್ ನೌಕಾಪಡೆಗೆ ಸೇರ್ಪಡೆಗೊಂಡ ಹೊಸ ಅಸ್ಟೂಟ್ ಕ್ಲಾಸ್ ಜಲಾಂತರ್ಗಾಮಿ ನೌಕೆಗಳಲ್ಲಿ ಆನ್ಸನ್ ಐದನೆಯದಾಗಿದೆ.

ಎಚ್‌ಎಂಎಸ್ ಅಸ್ಟೂಟ್, ಆಂಬುಷ್, ಆರ್ಟ್‌ಫುಲ್ ಮತ್ತು ಆಡಾಸಿಯಸ್‌ ಈ ಶ್ರೇಣಿಯ ಇತರೆ ನೌಕೆಗಳಾಗಿವೆ. ಅಸ್ಟೂಟ್ ಶ್ರೇಣಿಯ ನೌಕೆಗಳು ಬ್ರಿಟನ್ ನೌಕಾಪಡೆಯಿಂದ ನಿರ್ವಹಿಸಲ್ಪಡುವ ಅತಿದೊಡ್ಡ, ಅತ್ಯಾಧುನಿಕ, ಅತ್ಯಂತ ಶಕ್ತಿಶಾಲಿ ಜಲಾಂತರ್ಗಾಮಿ ನೌಕೆಗಳಾಗಿವೆ.

ಯುದ್ಧಪೀಡಿತ ಪಶ್ಚಿಮ ಏಷ್ಯಾ ಸಮುದ್ರದಲ್ಲಿ ನೌಕೆ ನಿಂತಿದ್ದು, ಸಂಘರ್ಷ ಉಲ್ಬಣಗೊಂಡರೆ ಇರಾನ್ ಮೇಲೆ ಕ್ಷಿಪಣಿಗಳನ್ನು ಹಾರಿಸಲು ಅನುವು ಮಾಡಿಕೊಡುತ್ತದೆ. ಈ ನೌಕೆ ನಿಯೋಜನೆಯ ಬಗ್ಗೆ ಬ್ರಿಟಿಷ್ ರಕ್ಷಣಾ ಸಚಿವಾಲಯದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಹೊರ್ಮುಜ್ ಜಲಸಂಧಿಯಲ್ಲಿ ಇರಾನ್‌ ದಿಗ್ಬಂಧನದ ಮಧ್ಯೆ ಜಲಾಂತರ್ಗಾಮಿ ನೌಕೆ ನಿಯೋಜನೆ ಬ್ರಿಟನ್ ಮುಂದಾಗಿದೆ ಎಂದು ವರದಿ ತಿಳಿಸಿದೆ.

ಬ್ರಿಟನ್ ಸೇರಿದಂತೆ ಇಪ್ಪತ್ತೆರಡು ರಾಷ್ಟ್ರಗಳು ಜಂಟಿಯಾಗಿ ಕೊಲ್ಲಿಯಲ್ಲಿ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿ ಮತ್ತು ಹೊರ್ಮುಜ್ ಜಲಸಂಧಿ ಮುಚ್ಚುವಿಕೆಯನ್ನು ಖಂಡಿಸಿವೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries