ಮುಂಬೈ: ವಿಶಾಖಪಟ್ಟಣದಿಂದ ದೆಹಲಿಗೆ ತೆಳಿತ್ತಿದ್ದ ಇಂಡಿಗೊ ವಿಮಾನದ ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ತುರ್ತು ಭೂಸ್ಪರ್ಶ ಮಾಡಿದೆ.
ವಿಶಾಖಪಟ್ಟಣಂನಿಂದ 160 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಹೊರಟಿದ್ದ 6E 579 ವಿಮಾನವು ಇಳಿಯುವ ಕೆಲ ಸಮಯದ ಮೊದಲು ಎಂಜಿನ್ ವೈಫಲ್ಯದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10.39ಕ್ಕೆ ಈ ಘಟನೆ ನಡೆದಿದೆ.

