HEALTH TIPS

ಇರಾನ್ ಮೇಲಿನ ಅಮೆರಿಕದ ದಾಳಿಯನ್ನು ವಿಶ್ವಸಂಸ್ಥೆಯಲ್ಲಿ ಖಂಡಿಸಿದ ಪಾಕಿಸ್ತಾನ

ವಿಶ್ವಸಂಸ್ಥೆ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ಇರಾನ್ ಮೇಲೆ ದಾಳಿ ನಡೆಸುತ್ತಿರುವ ಅಮೆರಿಕವನ್ನು ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಕಟುವಾಗಿ ಟೀಕಿಸಿದೆ. ಶಾಂತಿಯುತ ಮತ್ತು ಮಾತುಕತೆಯ ಪರಿಹಾರವನ್ನು ತಲುಪಲು ನವೀಕೃತ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ದಾಳಿ ನಡೆದಿದೆ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಆಸಿಮ್ ಇಫ್ತಿಕಾರ್ ಅಹ್ಮದ್ ಖಂಡಿಸಿದ್ದಾರೆ.

ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಇರಾನ್ ವಿರುದ್ಧ ಅನಗತ್ಯ, ಅಸಮರ್ಥನೀಯ ದಾಳಿಗಳನ್ನು ಪ್ರಾರಂಭಿಸುವುದನ್ನು ಪಾಕಿಸ್ತಾನ ಖಂಡಿಸುತ್ತದೆ. ಈ ಕ್ರಮಗಳು ದೂರಗಾಮಿ ಪರಿಣಾಮಗಳೊಂದಿಗೆ ಪ್ರದೇಶದಾದ್ಯಂತ ಶಾಂತಿ ಮತ್ತು ಸ್ಥಿರತೆಯನ್ನು ಹಾಳು ಮಾಡುತ್ತದೆ ಎಂದವರು ಹೇಳಿದ್ದಾರೆ.

ಸೌದಿ ಅರೆಬಿಯಾ, ಬಹ್ರೇನ್, ಜೋರ್ಡಾನ್, ಕುವೈತ್‌, ಖತರ್ ಮತ್ತು ಯುಎಇ ಮೇಲೆ ಪರಿಣಾಮ ಬೀರುವ ದಾಳಿಗಳು ಖಂಡನೀಯವಾಗಿದೆ ಮತ್ತು ಪಾಕಿಸ್ತಾನವು ಸಹೋದರ ದೇಶಗಳೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಅಹ್ಮದ್ ಹೇಳಿದ್ದು ಗರಿಷ್ಠ ಸಂಯಮ ವಹಿಸುವ ಅಗತ್ಯವನ್ನು ಒತ್ತಿ ಹೇಳಿದರು ಎಂದು ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries