ಮಂಜೇಶ್ವರ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಮತದಾರರು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಂದು ಅಂಕಿಅಂಶ ಸೂಚಿಸುತ್ತದೆ. ಇಲ್ಲಿ ಒಟ್ಟು 230113 ಮತದಾರರಿದ್ದಾರೆ. ಇದರಲ್ಲಿ 115801 ಪುರುಷರು ಮತ್ತು 114312 ಮಹಿಳೆಯರು ಒಳಗೊಂಡಿದ್ದಾರೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 105824 ಪುರುಷರು, 105399 ಮಹಿಳೆಯರು ಸೇರಿ ಒಟ್ಟು 210923 ಮತದಾರರಿದ್ದಾರೆ. ಉದುಮ ಕ್ಷೇತ್ರದಲ್ಲಿ 112165 ಪುರುಷರು, 1163 ಮಹಿಳೆಯರು, ನಾಲ್ವರು ಮಂಗಳಮುಖಿಯರು ಸೇರಿ ಒಟ್ಟು 258512 ಮತದಾರರಿದ್ದಾರೆ.
ಹೊಸದುರ್ಗ ಕ್ಷೇತ್ರದಲ್ಲಿ ಒಟ್ಟು 223940 ಮತದಾರರಿದ್ದು, ಇದರಲ್ಲಿ 109009 ಪುರುಷರು 114966 ಮಹಿಳೆಯರು ಮತ್ತು ಅರು ಮಂಗಳಮುಖಿಯರು ಒಳಗೊಂಡಿದ್ದಾರೆ.
ತೃಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ 102044 ಪುರುಷರು 100044 ಮಹಿಳೆಯರು ಮತ್ತು ಇಬ್ಬರು ಮಂಗಳಮುಖಿಯರು ಸೇರಿ ಒಟ್ಟು 230000 ಮತದಾರರಿದ್ದಾರೆ.

