HEALTH TIPS

ಹೆದ್ದಾರಿ ಸುರಕ್ಷತೆ, ನಿರ್ವಹಣೆ: ಎ.ಐ ನಿಗಾ

 ನವದೆಹಲಿ: ರಸ್ತೆ ಸುರಕ್ಷತೆ ಮತ್ತು ನಿರ್ವಹಣೆ ಮೇಲೆ ನಿರಂತರ ನಿಗಾ ವಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಡ್ಯಾಶ್‌ಕ್ಯಾಮ್‌ಗಳನ್ನು ಬಳಸಿಕೊಳ್ಳಲಿದೆ. 


ಡ್ಯಾಶ್‌ ಕ್ಯಾಮ್‌ ಅನಾಲಿಟಿಕ್ಸ್‌ ಸರ್ವೀಸಸ್‌ (ಡಿಎಎಸ್‌) ಹೆಸರಿನ ಈ ಯೋಜನೆಯಲ್ಲಿ ಎ.ಐ ಆಧಾರಿತ ಎಚ್‌ಡಿ ಡ್ಯಾಶ್‌ ಕ್ಯಾಮ್‌ಗಳನ್ನು ಹೆದ್ದಾರಿ ಪ್ರಾಧಿಕಾರದ ಗಸ್ತು ವಾಹನಗಳಿಗೆ ಅಳವಡಿಸಲಾಗುವುದು.

ಈ ವಾಹನಗಳು ವಾರಕ್ಕೊಮ್ಮೆ ನಿಗದಿಪಡಿಸಿದ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚರಿಸುವ ಮೂಲಕ ರಸ್ತೆ ಗುಣಮಟ್ಟ, ಸುರಕ್ಷತೆ ಮತ್ತಿತರೆ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ' ಎಂದು ಎನ್‌ಎಚ್‌ಎಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಸ್ತೆ ಗುಂಡಿ ಬಿದ್ದಿರುವುದು, ಬಿರುಕು ಮೂಡಿರುವುದು, ಡಾಂಬರು ಕಿತ್ತುಬಂದಿರುವುದು, ಹೆದ್ದಾರಿ ಅಂಚು ಗುರುತಿಸುವ ಪಟ್ಟಿ ಮಾಸಿರುವುದು, ಕಾರ್ಯನಿರ್ವಹಿಸದ ಬೀದಿ ದೀಪಗಳು, ರಸ್ತೆ ಒತ್ತುವರಿ, ಸೂಚನಾ ಫಲಕಗಳ ಅಳವಡಿಕೆ ಸೇರಿದಂತೆ ರಸ್ತೆ ನಿರ್ವಹಣೆಗೆ ಸಂಬಂಧಿಸಿದ 30ಕ್ಕೂ ಹೆಚ್ಚು ಲೋಪಗಳನ್ನು ಎ.ಐ ತಂತ್ರಜ್ಞಾನ ಗುರುತಿಸಲಿದೆ. ದೇಶದಾದ್ಯಂತ ಸುಮಾರು 40 ಸಾವಿರ ಕಿ.ಮೀ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಜಾಲದುದ್ದಕ್ಕೂ ಎ.ಐ ಆಧಾರಿತ ಡ್ಯಾಶ್‌ ಕ್ಯಾಮ್‌ಗಳು ನಿಗಾ ವಹಿಸಲಿವೆ.

ಎ.ಐ ಡ್ಯಾಶ್‌ ಕ್ಯಾಮ್‌ಗಳ ಮೂಲಕ ಹೆದ್ದಾರಿ ಅಂಚಿನಲ್ಲಿ ಕುಡಿಯುವ ನೀರಿನ ಪೈಲ್‌ಲೈನ್‌ಗಳು ಒಡೆದಿರುವುದು, ಚರಂಡಿಯಲ್ಲಿ ಹೂಳು ತುಂಬಿ ಪೊದೆ ಬೆಳೆದಿರುವುದು, ಸಂಪರ್ಕ ರಸ್ತೆಯ ಸ್ಥಿತಿಸೇರಿದಂತೆ ಹಲವು ಗಂಭೀರ ಸಮಸ್ಯೆಗಳ ಮೇಲೂ ನಿಗಾ ವಹಿಸಬಹುದು ಎಂದು ಎನ್‌ಎಚ್‌ಎಐ ಪ್ರಕಟಣೆ ತಿಳಿಸಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries