HEALTH TIPS

ಒಡಿಶಾ: ಕಾಂಗ್ರೆಸ್‌ ಉಚ್ಚಾಟಿತ ಮಾಜಿ ಶಾಸಕನಿಂದ ಹೊಸ ಪಕ್ಷ ಘೋಷಣೆ

ಭುವನೇಶ್ವರ: ಕಾಂಗ್ರೆಸ್‌ನಿಂದ ಉಚ್ಚಾಟಿತರಾಗಿರುವ ಮಾಜಿ ಶಾಸಕ ಮೊಹಮ್ಮದ್‌ ಮೋಕಿಮ್ ಅವರು ಹೊಸ ಪಕ್ಷ 'ಒಡಿಶಾ ಜನತಾ ಕಾಂಗ್ರೆಸ್‌' ಸ್ಥಾಪಿಸುವುದಾಗಿ ಹೇಳಿದ್ದಾರೆ.

ಏ. 8ರಂದು ಪಕ್ಷವು ಆರಂಭವಾಗಲಿದೆ ಎಂದು ಅವರು ಘೋಷಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಯಸ್ಸನ್ನು ಪ್ರಶ್ನಿಸಿದ ಬಳಿಕ ಕಾಂಗ್ರೆಸ್‌ನಿಂದ ಮೋಕಿಮ್ ಅವರನ್ನು ಉಚ್ಚಾಟಿಸಲಾಗಿತ್ತು.

'ಭ್ರಷ್ಟಾಚಾರದ ವಿರುದ್ಧ ಹೋರಾಡಲು ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ನಂತರ ಹೊಸ ಪಕ್ಷ ಸ್ಥಾಪಿಸಲು ನಿರ್ಧರಿಸಿದ್ದೇನೆ' ಎಂದು ಕಟಕ್- ಬಾರಾಬತಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಶಾಸಕರು ತಿಳಿಸಿದ್ದಾರೆ.

'ಬಿಜೆಡಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳು ತಮ್ಮ ಪ್ರಸ್ತುತತೆ ಕಳೆದುಕೊಂಡಿವೆ. 24 ವರ್ಷ ರಾಜ್ಯದ ಚುಕ್ಕಾಣಿ ಹಿಡಿದಿದ್ದ ಬಿಜೆಡಿಯು ಯುವಕರಿಗೆ ಗಮನ ಸೆಳೆಯುವಂತಹ ಏನೊಂದನ್ನೂ ಮಾಡಿಲ್ಲ' ಎಂದು ಅವರು ದೂರಿದ್ದಾರೆ.

'ಮೂರು ಬಣ್ಣಗಳನ್ನು ಒಳಗೊಂಡ ಪಕ್ಷದ ಧ್ವಜವು ಈಗಾಗಲೇ ಸಿದ್ಧವಾಗಿದೆ. ಚಿಹ್ನೆ ಪಡೆಯಲು ಕೆಲಸ ಮಾಡಲಾಗುತ್ತಿದೆ. ನಮ್ಮ ಪಕ್ಷವು ಯುವ ಸಮೂಹಕ್ಕೆ ಆದ್ಯತೆ ನೀಡಲಿದೆ' ಎಂದಿದ್ದಾರೆ.

ಮೋಕಿನ್ ಅವರ ಪುತ್ರಿ ಸೋಫಿಯಾ ಫಿರ್ದೋಸ್‌ ಅವರು ಕಟಕ್‌-ಬಾರಾಬತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಹಾಲಿ ಶಾಸಕಿ ಆಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries