HEALTH TIPS

ಯುದ್ಧನೌಕೆ ಅಬ್ರಹಾಂ ಲಿಂಕನ್‌ ಮೇಲಿನ ಇರಾನ್ ದಾಳಿ ನಿರಾಕರಿಸಿದ ಅಮೆರಿಕ

ವಾಷಿಂಗ್ಟನ್: ಅಮೆರಿಕದ ವಿಮಾನವಾಹಕ ನೌಕೆ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ಮಾಡಿರುವುದಾಗಿ ಗುರುವಾರ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿದೆ.

ಅಮೆರಿಕ ನೌಕೆ ಹಾನಿಗೊಳಗಾಗಿದ್ದು ಪ್ರಾದೇಶಿಕ ಜಲಮಾರ್ಗದಿಂದ ಹಿಮ್ಮೆಟ್ಟಿಸಿದ್ದೇವೆ ಎಂದು ಹೇಳಿದೆ.

ಒಮಾನ್ ಸಮುದ್ರದ ಬಳಿ ಕಾರ್ಯನಿರ್ವಹಿಸುತ್ತಿದ್ದ ಅಬ್ರಹಾಂ ಲಿಂಕನ್ ಯುದ್ಧನೌಕೆ ಮೇಲೆ ನೌಕಾಪಡೆಯು ನಿಖರ ದಾಳಿ ನಡೆಸಿದೆ ಎಂದು ಇರಾನಿನ ಮಾಧ್ಯಮ ಸಂಸ್ಥೆ ಪ್ರೆಸ್ ಟಿವಿ ವರದಿ ಮಾಡಿದೆ. ಆದರೆ, ಈ ವರದಿಗಳನ್ನು ಅಮೆರಿಕ ಮಿಲಿಟರಿ ನಿರಾಕರಿಸಿದೆ.

ಸುಧಾರಿತ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಲಾಗಿದ್ದು, ಇರಾನ್‌ನ ಕಡಲ ಗಡಿಯಿಂದ ಸುಮಾರು 340 ಕಿ.ಮೀ ದೂರದಲ್ಲಿ ನೌಕೆ ಮೇಲೆ ದಾಳಿ ನಡೆದಿದೆ ಎಂದು ಇರಾನಿನ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಾರ್ಯಾಚರಣೆಯು ಜಲಮಾರ್ಗದಲ್ಲಿ ಇರಾನ್‌ನ ಸಾರ್ವಭೌಮತ್ವವನ್ನು ಕಾಪಾಡಿಕೊಂಡು ವಿದೇಶಿ ಮಿಲಿಟರಿ ಒತ್ತಡವನ್ನು ಹಿಮ್ಮೆಟ್ಟಿಸುವುದರ ಭಾಗವಾಗಿದೆ. ಅಮೆರಿಕ ನೌಕೆಗೆ ಆಗಿರುವ ಹಾನಿ, ಸಾವಿನ ಬಗ್ಗೆ ಅಧಕಾರಿಗಳು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ದಾಳಿ ವರದಿಗಳನ್ನು ನಿರಾಕರಿಸಿರುವ ಅಮೆರಿಕ ಮಿಲಿಟರಿ, ನೌಕೆ ಕಾರ್ಯಾಚರಿಸುತ್ತಿರುವ ಚಿತ್ರಗಳನ್ನು ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ.

'ಅಬ್ರಹಾಂ ಲಿಂಕನ್ ಕಾರ್ಯಾಚರಣೆಯ ತಂಡವು ಆಪರೇಷನ್ ಎಪಿಕ್ ಫ್ಯೂರಿ ಮತ್ತು ಸಮುದ್ರದಿಂದ ವಿದ್ಯುತ್ ಯೋಜನೆಗೆ ಬೆಂಬಲವನ್ನು ಮುಂದುವರೆಸಿದೆ' ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಮಾರ್ಕ್ -45 ನೌಕಾ ಹಡಗಿನ ಬಂದೂಕನ್ನು ಬಳಸಿ ನಮ್ಮ ಹಡಗಿನ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಲಾಯಿತು ಎಂದು ಅಮೆರಿಕದ ಇಬ್ಬರು ಅಧಿಕಾರಿಗಳು ಸಿಬಿಎಸ್ ನ್ಯೂಸ್‌ಗೆ ತಿಳಿಸಿ‌ದ್ದಾರೆ. ಬಳಿಕ, ಇರಾನ್ ಹಡಗಿನ ಮೇಲೆ ದಾಳಿ ನಡೆಸಲಾಯಿತು ಎಂದು ಅವರು ತಿಳಿಸಿದ್ದಾರೆ.

ವಾಯುಪಡೆಯ ವಿಮಾನಗಳಿಗೆ ಇಂಧನ ಪೂರೈಕೆ ಮಾಡುತ್ತಿದ್ದ ಐವರು ಸಿಬ್ಬಂದಿ ಇದ್ದ ಅಮೆರಿಕದ ವಿಮಾನವನ್ನು ಇರಾಕ್‌ನ ಇರಾನ್ ಬೆಂಬಲಿತ ಇಸ್ಲಾಮಿಕ್ ರೆಸಿಸ್ಟೆಂಟ್ ಗ್ರೂಪ್ ಹೊಡೆದುರುಳಿಸಿದ ಕೆಲ ಗಂಟೆಗಳಲ್ಲೇ ಅಮೆರಿಕದ ನೌಕೆ ಮೇಲೆ ದಾಳಿ ನಡೆಸಿದ್ದೇವೆ ಎಂದು ಇರಾನ್ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries