HEALTH TIPS

ಅಕ್ಷಯ ಕೇಂದ್ರ ಆರಂಭಕ್ಕಾಗಿ ಅರ್ಜಿ ಸಲ್ಲಿಕೆ-ದಿನಾಂಕ ಮುಂದೂಡಿಕೆ

ಕಾಸರಗೋಡು: ಕೇರಳ ಸರ್ಕಾರದ ಅಂಗೀಕೃತ ಅಂತರ್ಜಾಲಿಕ ಸೇವಾ ಸಂಸ್ಥೆಯಾಗಿರುವ ಅಕ್ಷಯ ಕೇಂದ್ರಗಳನ್ನು ಕಾಸರಗೋಡು ಜಿಲ್ಲೆಯ 59 ಸ್ಥಳಗಳಲ್ಲಿ ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಜನರಲ್ ವಿಭಾಗದಲ್ಲಿ 52, ಪರಿಶಿಷ್ಟ ಜಾತಿ 5 ಹಾಗೂ ಪರಿಶಿಷ್ಟ ವರ್ಗ 2 ಕೇಂದ್ರಗಳಿಗೆ ವ್ಯವಸ್ಥಾಪಕರನ್ನು ಆಯ್ಕೆ ಮಾಡಲಾಗುತ್ತದೆ. ಉದ್ಯಮಶೀಲತೆ ಹಾಗೂ ಸಾಮಾಜಿಕ ಬದ್ಧತೆ ಹೊಂದಿರುವ, 01.01.2026ರ ವೇಳೆಗೆ 18 ವರ್ಷ ಪೂರೈಸಿದವರೂ 50 ವರ್ಷ ಮೀರದ ಅರ್ಹ ವ್ಯಕ್ತಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಪ್ಲಸ್ ಟು ಯಾ ಪ್ರೀ-ಡಿಗ್ರಿ ಶಿಕ್ಷಣ ಕಡ್ಡಾಯವಾಗಿದ್ದು, ಕಂಪ್ಯೂಟರ್ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಹೆಚ್ಚುವರಿ ಅರ್ಹತೆಗಳನ್ನೂ ಪರಿಗಣಿಸಲಾಗುತ್ತದೆ. ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರು, ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರುವವರಿಗೆ ಹೆಚ್ಚುವರಿ ಅಂಕ ಲಭ್ಯವಾಘಲಿದೆ.  ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರಿಗಾಗಿ ಮೀಸಲಾದ ಕೇಂದ್ರಗಳಿಗೆ ಅವರು ಮಾತ್ರ ಅರ್ಜಿ ಸಲ್ಲಿಸಬಹುದು. ವ್ಯವಸ್ಥಾಪಕರ ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ. ಫಾರ್ಮ್ ಮಾಕ್ರ್ಸ್ ಹಾಗೂ ಆನ್‍ಲೈನ್ ಅರ್ಜಿ ಸಲ್ಲಿಸುವಾಗ ಅಪ್‍ಲೋಡ್ ಮಾಡಿದ ದಾಖಲೆಗಳ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ.

ಆನ್‍ಲೈನ್ ಪರೀಕ್ಷೆಯ ಅಂಕಗಳು ಹಾಗೂ ನೇರ ಸಂದರ್ಶನದ ಒಟ್ಟು ಅಂಕಗಳ ಆಧಾರದ ಮೇಲೆ ಆಯ್ಕೆಯಾಗುವವರು, ನಿಗದಿತ ಸ್ಥಳದಲ್ಲಿ ಕನಿಷ್ಠ 300 ಚದರ ಅಡಿ ವಿಸ್ತೀರ್ಣ ಹೊಂದಿದ ಸ್ಥಳ ಮತ್ತು ಅಗತ್ಯ ಕಂಪ್ಯೂಟರ್ ಸೌಲಭ್ಯಗಳನ್ನು ಒದಗಿಸುವಂತೆ ಪ್ರಕಟಣೆ ತಿಳಿಸಿದೆ. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries