ಕಾಸರಗೋಡು: ಕೇರಳ ವಿಧಾನ ಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಸರಗೋಡು ತಾಲೂಕು ಕಚೇರಿ ವಠಾರದಲ್ಲಿ ಮಲಯಾಳಂ ಭಾಷಾ ಮಸೂದೆ ವಿರುದ್ಧ ಮಾ 28ರಂದು ನಡೆಸಲು ತೀರ್ಮಾನಿಸಿದ, ಧರಣಿ ಮುಷ್ಕರವನ್ನು ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ತೀರ್ಮಾನಿಸಿ ಕನ್ನಡ ಬಾಂಧವರಿಗೆ ತಿಳಿಸಲಾಗುವುದು ಎಂಬುದಾಗಿ ಕರ್ನಾಟಕ ಸಮಿತಿ ಅಧ್ಯಕ್ಷ ಹಾಗೂ ಹೋರಾಟದ ನೇತೃತ್ವ ವಹಿಸಿರುವ ವಕೀಲ ಮುರಳೀಧರ ಬಳ್ಳುಕುರಾಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

