ನವದೆಹಲಿ: ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 132ರ ಅಡಿಯ ಶೋಧ ಮತ್ತು ಜಪ್ತಿಯ ಅಧಿಕಾರವನ್ನು ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರನ್ನು ಒಳಗೊಂಡ ನ್ಯಾಯಪೀಠವು, 'ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವವರ ಪತ್ತೆಗಾಗಿ ಇಂಥ ನಿಬಂಧನೆಗಳ ಅಗತ್ಯವಿದೆ' ಎಂದು ಹೇಳಿದೆ.
'ಪ್ರಾರಂಭದಲ್ಲಿ ಈ ನಿಬಂಧನೆಯು ಅಸಮಂಜಸ ಎನಿಸಬಹುದು. ಅದರ ದುರುಪಯೋಗ ಆಗಬಹುದು ಎಂದೂ ಎನಿಸಬಹುದು. ಆದರೆ ದೊಡ್ಡ ದೊಡ್ಡ ತೆರಿಗೆ ಕಳ್ಳರ ಪತ್ತೆಗಾಗಿ ಅದನ್ನು ರೂಪಿಸಲಾಗಿದೆ' ಎಂದು ತಿಳಿಸಿದೆ.
'ಈ ನಿಬಂಧನೆಯು ಅಸಾಂವಿಧಾನಿಕ' ಎಂಬ ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ವಾದವನ್ನು ನ್ಯಾಯಪೀಠವು ತಳ್ಳಿಹಾಕಿದೆ.

