HEALTH TIPS

ವೆನಿಜುವೆಲಾಗೆ ಮರಳಲಿದ್ದೇನೆ: ಮಾರಿಯಾ ಕೊರಿನಾ ಮಚಾದೊ

ಕರಾಕಸ್‌: ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ ಅವರು ವೆನಿಜುವೆಲಾಕ್ಕೆ ಮರಳುವುದಾಗಿ ಶನಿವಾರ ಹೇಳಿದ್ದಾರೆ. ಜತೆಗೆ ದೇಶದಲ್ಲಿ ಶೀಘ್ರವೇ ಚುನಾವಣೆಗಳು ನಡೆಯಲಿವೆ ಎಂಬ ಸುಳಿವನ್ನೂ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಚಾದೊ, 'ಇನ್ನು ಕೆಲವೇ ವಾರಗಳಲ್ಲಿ ಮರಳಿ ಬರಲಿದ್ದೇನೆ. ಬಹುದೊಡ್ಡ ಚುನಾವಣಾ ಗೆಲುವಿಗೆ ಸಿದ್ಧತೆ ನಡೆಸಿ' ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಆದರೆ, ನಿಖರವಾಗಿ ಯಾವಾಗ ಬರಲಿದ್ದಾರೆ ಎಂದು ತಿಳಿಸಿಲ್ಲ.

ಅಮೆರಿಕದ ಪಡೆಗಳು ಜನವರಿಯಲ್ಲಿ ವೆನಿಜುವೆಲಾದ ಮೇಲೆ ಕಾರ್ಯಾಚರಣೆ ನಡೆಸಿ, ಅಧ್ಯಕ್ಷ ನಿಕೊಲಸ್‌ ಮಡೂರೊ ಮತ್ತು ಅವರ ಪತ್ನಿಯನ್ನು ವಶಕ್ಕೆ ಪಡೆದಿವೆ. ಆ ಬಳಿಕ ವೆನಿಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಡೆಲ್ಸಿ ರಾಡ್ರಿಗಸ್‌ ಅಧಿಕಾರ ವಹಿಸಿಕೊಂಡಿದ್ದಾರೆ.

ವೆನಿಜುವೆಲಾದಲ್ಲಿ ಚುನಾವಣೆ ನಡೆಯುವ ಬಗ್ಗೆ ಅಮೆರಿಕ ಕೂಡ ಯಾವುದೇ ಸುಳಿವು ನೀಡಿಲ್ಲ. ಆದಾಗ್ಯೂ, ಮಚಾದೊ ಚುನಾವಣಾ ಗೆಲುವಿನ ಬಗ್ಗೆ ಮಾತನಾಡಿರುವುದು ಗಮನ ಸೆಳೆದಿದೆ. ಏತನ್ಮಧ್ಯೆ, ಮಚಾದೊ ದೇಶಕ್ಕೆ ವಾಪಸಾದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಹಂಗಾಮಿ ಅಧ್ಯಕ್ಷೆ ಡೆಲ್ಸಿ ರಾಡ್ರಿಗಸ್‌ ಎಚ್ಚರಿಸಿದ್ದಾರೆ.

ವೆನೆಜುವೆಲಾದ ಜನರ ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಶಾಂತಿಯುತವಾಗಿ ನಡೆಸಿದ ಹೋರಾಟಗಳಿಗಾಗಿ ಮಚಾದೊ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ನೀಡಲಾಗಿತ್ತು. ಆ ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ಸಮರ್ಪಿಸುವ ಮೂಲಕ ಮಚಾದೊ ವಿವಾದಕ್ಕೀಡಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries