ಲೈಲೆ ಲಾಂಜ್: ದೇಶವು ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು 300ರಿಂದ ಹೆಚ್ಚಿಸಲಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಸೋಮವಾರ ಹೇಳಿದ್ದಾರೆ.
ದೇಶದ ಗುರಿ ನಿರ್ದೇಶಿತ ಕ್ಷಿಪಣಿ ಜಲಾಂತರ್ಗಾಮಿಯನ್ನು ಹೊಂದಿರುವ ವಾಯುವ್ಯ ಫ್ರಾನ್ಸ್‌ನ ಲೈಲೆ ಲಾಂಜ್‌ನ ಸೇನಾ ನೆಲೆಯಲ್ಲಿ ಮಾತನಾಡಿದ ಅವರು, 'ನಮ್ಮ ಶಸ್ತ್ರಾಗಾರದ ಸಿಡಿತಲೆಗಳನ್ನು ಹೆಚ್ಚಿಸಲು ನಾನು ತೀರ್ಮಾನಿಸಿದ್ದೇನೆ' ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, ಎಷ್ಟು ಹೆಚ್ಚಳವಾಗಲಿದೆ ಎಂಬ ಅಂಕಿ ಅಂಶವನ್ನು ಅವರು ನೀಡಲಿಲ್ಲ. 1992ರ ನಂತರ ಫ್ರಾನ್ಸ್ ತನ್ನ ಪರಮಾಣು ಶಸ್ತ್ರಾಗಾರವನ್ನು ಹೆಚ್ಚಿಸಿರಲಿಲ್ಲ.

