ಹೀಗೆ ಮಾಡುವುದು ಅನುಚಿತ ವ್ಯಾಪಾರ ನೀತಿಯಾಗುತ್ತದೆ ಹಾಗೂ ಈ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅದು ಹೇಳಿದೆ.
ಇಂಥ ಶುಲ್ಕಗಳನ್ನು ಹೇರಲಾಗುತ್ತಿದೆ ಎಂಬ ಬಗ್ಗೆ ಹೊಟೇಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ವಿರುದ್ಧ ಹಲವು ದೂರುಗಳು ಬಂದಿವೆ ಎಂದು ಹೇಳಿರುವ ಸಿಸಿಪಿಎ, ಇದು 2019ರ ಗ್ರಾಹಕ ರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ದರಪಟ್ಟಿಯಲ್ಲಿ ಸೂಚಿಸಲಾಗಿರುವ ದರಕ್ಕೆ ಅನ್ವಯವಾಗುವ ತೆರಿಗೆಗಳನ್ನು ಮಾತ್ರ ವಿಧಿಸಬಹುದಾಗಿದೆ ಎಂದು ಅದು ಹೇಳಿದೆ.

