ಎಲ್‌ಪಿಜಿ ಮರುಭರ್ತಿ ನೋಂದಣಿ ನಿಯಮಾವಳಿಗಳಲ್ಲಿ ಬದಲಾವಣೆಯಾಗಿದೆ ಎಂಬುದಾಗಿ ಮಾಧ್ಯಮಗಳ ಒಂದು ವರ್ಗದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವರದಿಯು ಸತ್ಯವಲ್ಲ ಎಂದು ಅಧಿಕೃತ ಸ್ಪಷ್ಟೀಕರಣವೊಂದರಲ್ಲಿ ಸಚಿವಾಲಯ ತಿಳಿಸಿದೆ.
ಹಾಲಿ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಅದು ಹೇಳಿದೆ.
ಅಡುಗೆ ಅನಿಲ ಸಿಲಿಂಡರ್‌ಗಳ ಎರಡು ಮರುಭರ್ತಿ ನೋಂದಣಿಗಳ ನಡುವಿನ ಕನಿಷ್ಠ ಅವಧಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಅದು ಹೇಳಿದೆ.
ಎರಡು ಮರುಭರ್ತಿ ನೋಂದಣಿಗಳ ನಡುವಿನ ಅವಧಿಯು ನಗರ ಪ್ರದೇಶಗಳಿಗೆ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ 45 ದಿನಗಳು ಎಂಬ ನಿಯಮವು ಮುಂದುವರಿಯುತ್ತದೆ ಎಂದು ಸಚಿವಾಲಯ ತಿಳಿಸಿದೆ.

