ಕೊಚ್ಚಿ: ಕೇರಳ ವಿಧಾನಸಭಾ ಚುನಾವಣೆಗಾಗಿ ಸಿಪಿಎಂ ಮತ್ತು ಬಿಜೆಪಿ ಮೈತ್ರಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇಂಥ ಪ್ರಯತ್ನಗಳು ಈ ಬಾರಿ ಕೇರಳದಲ್ಲಿ ಯಶಸ್ವಿಯಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಅವರು ಭಾನುವಾರ ಹೇಳಿದರು.
'ಜನರ ಭಾವನೆಗಳು ತಮ್ಮ ವಿರುದ್ಧವಾಗಿದೆ ಎಂಬುವುದು ಸಿಪಿಎಂ ಮತ್ತು ಎಲ್‌ಡಿಎಫ್‌ಗೆ ಗೊತ್ತಿದೆ.
ಅವರು ಕೊನೆಯ ತಂತ್ರವನ್ನು ಬಳಸುತ್ತಿದ್ದಾರೆ. ಸಿಪಿಎಂ ಮತ್ತು ಬಿಜೆಪಿ ಸ್ನೇಹ ಕೇರಳಕ್ಕೆ ಹೊಸದೇನಲ್ಲ' ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
'ಪಿ.ಎಂ ಶ್ರೀ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಎಡಪಕ್ಷಗಳ ನಿಲುವುಗಳು ಈ ಸಂಬಂಧದ ಸಂಕೇತವಾಗಿದೆ. ಮುಖ್ಯಮಂತ್ರಿ ವಿರುದ್ಧದ ಲಾವ್ಲಿನ್ ಪ್ರಕರಣವು ಮುಂದೂಲ್ಪಡುತ್ತಿದೆ. ಕೇರಳದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯವೈಖರಿಯನ್ನು ನೋಡಿದ್ದೇವೆ' ಎಂದು ಟೀಕಿಸಿದರು.
'ಇದೇ ರೀತಿಯ ಸಂಬಂಧ ಸಿಪಿಎಂ ಮತ್ತು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲೂ ಕಾಣಿಸುತ್ತದೆ. ಚುನಾವಣೆಯಲ್ಲಿ ಪರಸ್ಪರ ಸಹಾಯ ಮಾಡಿಕೊಳ್ಳುವ ಒಪ್ಪಂದವನ್ನು ಎರಡು ಪಕ್ಷಗಳು ಮಾಡಿವೆ' ಎಂದು ಆರೋಪಿಸಿದರು.
'ನನಗೆ ವಿಶ್ವಾಸವಿದೆ ಅವರ ಪಕ್ಷದ ಕಾರ್ಯಕರ್ತರು ಆ ಸಂಬಂಧವನ್ನು ನಿರಾಕರಿಸುತ್ತಾರೆ. ಅವರು ಈ ಹಿಂದಯೂ ಇದಕ್ಕೆ ಪ್ರಯತ್ನಿಸಿದ್ದರು, ಆದರೆ ಅದು ಬಹಿರಂಗಗೊಂಡಿತ್ತು. ಅದೇ ಪರಿಸ್ಥಿತಿ ಮತ್ತೆ ಬರುತ್ತದೆ' ಎಂದರು.

