ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಗಳ ಜನ್ಮ ದಿನದ ಅಂಗವಾಗಿ ಸೋಮವಾರ ಬಿಜೆಪಿ ಮಂಜೇಶ್ವರ ವಿಧಾನ ಸಭಾ ಅಭ್ಯರ್ಥಿ ಕೆ ಸುರೇಂದ್ರನ್ ಗೋವಿಂದ ಪೈಗಳ ನಿವಾಸದಲ್ಲಿ ಪುತ್ಥಳಿಗೆ ಪುಷ್ಪರ್ಚನೆ ಮಾಡಿ ನಮಿಸಿದರು.
ಕನ್ನಡದ ಪ್ರಥಮ ರಾಷ್ಟ್ರ ಕವಿ ಗೋವಿಂದ ಪೈಗಳ ಜನ್ಮ ನಾಡಿನಲ್ಲಿ ಕೇರಳ ಎಡರಂಗ ಸರ್ಕಾರ ಮಲಯಾಳಂ ಭಾಷಾ ಮಸೂದೆ ಜಾರಿ ಮಾಡಿ ಗಡಿನಾಡ ಕನ್ನಡಿಗರ ಸಂವಿಧಾನ ಬದ್ದ ಹಕ್ಕುಗಳನ್ನು ಕಸಿದಿದೆ ಎಂದು ಕೆ.ಸುರೇಂದ್ರನ್ ದೂರಿದರು. ಮಂಜೇಶ್ವರ ಶಾಸಕರು ಮಲಯಾಳಂ ಭಾಷಾ ಮಸೂದೆ ಜಾರಿಯಾಗುವ ಅಧಿವೇಶನದಲ್ಲಿ ಭಾಗವಹಿಸದೆ ಗೈರು ಹಾಜರಾಗಿ ಕನ್ನಡ ವಿರೋಧಿ ನೀತಿ ತೋರಿದರು ಎಂದು ಅವರು ಆರೋಪಿದರು.
ಗಡಿನಾಡ ಕನ್ನಡಿಗರ ಹಕ್ಕು ಸಂರಕ್ಷಣೆ ನನ್ನ ಗುರಿ, ಭಾಷಾ ಅಲ್ಪಸಂಖ್ಯಾ ಜನರ ನ್ಯಾಯ ಯುತ ಬೇಡಿಕೆ ಗಳಿಗೆ ಬಿಜೆಪಿ ಸ್ಪಂದಿಸಲಿದೆ.ಮಾತ್ರವಲ್ಲ ಹೋರಾಟಕ್ಕೆ ನೇತೃತ್ವ ನೀಡಲಿದೆ ಎಂದು ಕೆ ಸುರೇಂದ್ರನ್ ಹೇಳಿದರು.

