ಕಾಸರಗೋಡು: ದೇಶದ ಆಧ್ಯಾತ್ಮಿಕ ಪರಂಪರೆ ವಿಶ್ವಕ್ಕೆ ಮಾರ್ಗದರ್ಶಿಯಾಗಿದ್ದು, ಮಹಿಳೆಯರನ್ನು ಗುರುತಿಸುವ ಹಾಗೂ ಅವರನ್ನು ಸ್ವೀಕರಿಸುವ ಭಾರತೀಯ ಸಂಸ್ಕೃತಿಯಿಂದ ಸ್ತ್ರೀಕುಲದ ಗೌರವ ಹೆಚ್ಚಲು ಕಾರಣವಾಗಿರುವುದಾಗಿ ಚಿನ್ಮಯ ಮಿಷನ್‍ನ ಬ್ರಹ್ಮಚಾರಿಣಿ ದಿಶಾ ಚೈತನ್ಯ ಜಿ ಹೇಳಿದರು.
ಅವರು ಭಾರತೀಯ ವಕೀಲರ ಪರಿಷತ್ ಕಾಸರಗೋಡು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಹಿರಿಯ ವಕೀಲೆ ಬೀನಾ ಕೆ.ಎಂ ಅಧ್ಯಕ್ಷತೆ ವಹಿಸಿದ್ದರು.
ಭಾರತೀಯ ವಕೀಲರ ಪರಿಷತ್ ಜಿಲ್ಲಾಧ್ಯಕ್ಷ ವಕೀಲ ಎ.ಸಿ. ಅಶೋಕ್ ಕುಮಾರ್, ವಕೀಲ ಬಿ. ರವೀಂದ್ರನ್ ಮೊದಲಾದವರು ಉಪಸ್ಥಿತರಿದ್ದರು. ವಕೀಲರಾದ ಹರ್ಷಿತಾ ಸ್ವಾಗತಿಸಿದರು. ಜಾಹ್ನವಿ ವಂದಿಸಿದರು.

