ನವದೆಹಲಿ: ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯು ಬುಧವಾರ ಅನುಮೋದನೆ ನೀಡಿತು.
ಲೋಕಸಭೆಯು ಮಂಗಳವಾರ ಮಸೂದೆಗೆ ಒಪ್ಪಿಗೆ ನೀಡಿತ್ತು.
ಮಸೂದೆ ಕುರಿತ ಚರ್ಚೆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವಿರೇಂದ್ರ ಕುಮಾರ್ ಅವರು, 'ಪ್ರಸ್ತಾವಿತ ಮಸೂದೆಯು ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಯತ್ನ ಮಾಡುತ್ತಿದೆ' ಎಂದು ಹೇಳಿದರು.
'ಲಿಂಗದ ಕಾರಣಕ್ಕಾಗಿಯೇ ತಾರತಮ್ಯ ಎದುರಿಸುವ ಜನರಿಗೆ ರಕ್ಷಣೆ ನೀಡುವ ಗುರಿಯನ್ನು ಮಸೂದೆಯು ಹೊಂದಿದೆ' ಎಂದು ತಿಳಿಸಿದರು.

