ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯಲ್ಲಿ ಸುಧೀರ್ಘ 42 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಹಾಗೂ ಮಂಗಳವಾರ ಶ್ರೀರಕ್ತೇಶ್ವರಿ ದೈವಗಳ ಕೋಲ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ನೆರವೇರಿತು.
ಭಾನುವಾರ ರಾತ್ರಿ ಶ್ರೀದೇವರ ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ಪ್ರಾರ್ಥನೆ, ತೊಡಂಙಲ್ ಬಳಿಕ ಅನ್ನದಾನ,ಭಂಡಾರ ಬರುವುದು ನಡೆಯಿತು. ಬಳಿಕ ಸೋಮವಾರ ಮುಂಜಾನೆ ಪೊಟ್ಟನ್ ದೈವದ ತೋಟ್ಟಂಪಾಟ್, ಪ್ರಾರ್ಥನೆ, ಮುಖವಾಡ ಧಾರಣೆ,ಕೋಲ, ಪ್ರಸಾದ ವಿತರಣೆ ನಡೆಯಿತು. ಬಳಿಕ ಸಪ್ತಶತೀ ಸಹಿತ ಶ್ರೀದೇವೀ ಮಹಾತ್ಮ್ಯೆಯನ್ನೊಳಗೊಂಡ ರಕ್ತೇಶ್ವರಿ ದೈವದ ತೋಟಂಪಾಟ್, ದೈವಕೋಲ, ಪ್ರಸಾದ ವಿತರಣೆ ಬಳಿಕ ಗುಳಿಗನ್ ದೈವದ ಕೋಲದೊಂದಿಗೆ ಸಮಾರೋಪಗೊಂಡಿತು.
ಪುದುಕೋಳಿ ತರವಾಡಿನ ಶ್ರೀಕೃಷ್ಣ ಭಟ್, ಗಣೇಶ ಭಟ್, ಶಂಕರ ಭಟ್ ಪರಕ್ಕಾಲು, ಗೋವಿಂದ ಭಟ್ ಪರಕ್ಕಾಲು,ಕೃಷ್ಣಮೂರ್ತಿ ಪುದುಕೋಳಿ ಮೊದಲಾದವರು ನೇತೃತ್ವ ವಹಿಸಿದ್ದರು. ಸ್ಥಳೀಯರಲ್ಲದೆ ಕೇರಳದ ಪಾಲಕ್ಕಾಡ್, ಕರ್ನಾಟಕದ ಸುಖ್ಯ, ಪುತ್ತೂರು, ಬಂಟಾಳ, ಮಂಗಳೂರು ಸಹಿತ ವಿವಿಧೆಡೆಗಳ ಭಕ್ತಾದಿಗಳು ಪಾಲ್ಗೊಂಡರು. ಮಾನ್ಯದ ಉಣ್ಣಿ ಪಣಿಕ್ಕರ್, ಉದಯ ಪಣಿಕ್ಕರ್ ತಂಡ ನಿರ್ವಹಿಸಿದರು.

.jpg)
.jpg)
.jpg)
.jpg)
.jpg)
