ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಯಾದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಕಾಸರಗೋಡು ತಾಲೂಕು ಇದರ ತಾಲೂಕು ವೇದಿಕೆ ಪದಾಧಿಕಾರಿಗಳ ಸಭೆ ಕಾಸರಗೋಡು ಎಕೆಆರ್‍ಡಿಎ ಸಭಾಂಗಣದಲ್ಲಿ ಕೋಶಾಧಿಕಾರಿ ಶರೀಫ್ ಕೊಡವಂಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಉದ್ಘಾಟಿಸಿ ಮಾತನಾಡಿ, ಕಾಸರಗೋಡು ಭಾಗದಲ್ಲಿ ಹಲವಾರು ಶಿಬಿರಗಳು ನಡೆದಿದ್ದು ಅನೇಕರು ಕುಡಿತದ ಚಟವನ್ನು ಬಿಟ್ಟು ನವಜೀವನ ಆರಂಭಿಸಿದ್ದಾರೆ. ಈ ಭಾಗವನ್ನು ಮದ್ಯಮುಕ್ತಗ್ರಾಮವನ್ನಾಗಿಸುವ ಪ್ರಯತ್ನ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಅವರ ಅವಧಿ ಸಂಪೂರ್ಣವಾಗಿರುವುದರಿಂದ ತಾಲೂಕು ವೇದಿಕೆಯ ಎಲ್ಲಾ ಪದಾಧಿಕಾರಿಗಳ ಸೂಚನೆಯಂತೆ ನೂತನವಾಗಿ ಜಯರಾಮ ಪಾಟಾಳಿಯವರನ್ನು ತಾಲೂಕು ವೇದಿಕೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಜನಜಾಗೃತಿ ವಿಭಾಗದ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ 2026-27ನೇ ಸಾಲಿನ ಕ್ರಿಯಾ ಯೋಜನೆಯ ಗುರಿ ಸಾಧನೆ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಕಾಸರಗೋಡು ಯೋಜನಾ ಕಚೇರಿ ವ್ಯಾಪ್ತಿಯ ವಲಯವಾರು ಸಾಧನ ವರದಿಯನ್ನು ವಲಯದ ಮೇಲ್ವಿಚಾರಕರು ಮಂಡಿಸಿದರು. ಯೋಜನಾಧಿಕಾರಿ ದಿನೇಶ್ ಗತಸಭೆಯ ವರದಿ ಮಂಡಿಸಿದರು. ಬದಿಯಡ್ಕ ವಲಯ ಮೇಲ್ವಿಚಾರಕ ಸುಗುಣ ಓ ಹವಲ್ದಾರ್ ಸ್ವಾಗತಿಸಿ, ಕಾಸರಗೋಡು ವಲಯದ ಮೇಲ್ವಿಚಾರಕ ಗೋಪಾಲಕೃಷ್ಣ ನಿರೂಪಿಸಿದರು. ಕಾರಡ್ಕ ವಲಯದ ಮೇಲ್ವಿಚಾರಕ ಸುರೇಶ್ ವಂದಿಸಿದರು.

.jpg)
.jpg)
