ಮಂಜೇಶ್ವರ: ಮೀಯಪದವಿನ ಪ್ರತಿಷ್ಠಿತ ಕ್ರೀಡೆ ಹಾಗೂ ಸಾಂಸ್ಕøತಿಕ ಸಂಘಟನೆಯಾದ ಮಾಸ್ಟರ್ಸ್ ಆಟ್ರ್ಸ್-ಸ್ಪೋಟ್ರ್ಸ್ ಕ್ಲಬ್ ವತಿಯಿಂದ 15ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮೀಯಪದವು ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ನಾರಾಯಣೀಯಂ ವೇದಿಕೆಯಲ್ಲಿ ಜರಗಿತು.
ಕಾರ್ಯಕ್ರಮದ ಅಂಗವಾಗಿ ಜರಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ಕೆ.ವಿ ರಾಧಾಕೃಷ್ಣ ಭಟ್ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳದ ಸಂಚಾಲಕ ರಾಜಾರಾಮ ಭಟ್, ದುರ್ಗಾಪರಮೇಶ್ವರಿ ದೇವಸ್ಥಾನ ಐಲ ಇದರ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಜ್ಯೋತಿ ಪಿ. ರೈ, ವಿ.ಎ.ಯು.ಪಿ.ಎಸ್ ಮೀಯಪದವಿನ ಆಡಳಿತ ಸಲಹೆಗಾರ ಶ್ರೀಧರ ರಾವ್ ಆರ್.ಎಂ., ಎಸ್.ವಿ.ವಿ.ಎಚ್.ಎಸ್.ಎಸ್ ಮೀಯಪದವಿನ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕ್ಯಾಂಪ್ಕೋ ನಿರ್ದೇಶಕಿ ಸೌಮ್ಯ ಪ್ರಕಾಶ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ 2024-25ನೇ ಸಾಲಿನ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಜಗದೀಶ್ ಶೆಟ್ಟಿ ಎಲಿಯಾಣ, ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ತುಳುನಾಡ ರತ್ನ ದಿನೇಶ್ ಅತ್ತಾವರ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟ ಪೂರ್ವ ಸದಸ್ಯ, ಬರಹಗಾರ ಯೋಗೀಶ್ ರಾವ್ ಚಿಗುರುಪಾದೆ ಹಾಗೂ ಅಂತಾರಾಷ್ಟ್ರೀಯ ತ್ರೋಬಾಲ್ ಆಟಗಾರ ಬಸವರಾಜ್ ಇವರನ್ನು ಗೌರವಿಸಲಾಯಿತು.
ಎಸ್.ವಿ.ವಿ.ಎಚ್ ಎಸ್ ಎಸ್ ಶಾಲೆಯ ಅಧ್ಯಾಪಕ ಬ್ರಿಜೇಶ್ ಪ್ರಾರ್ಥನೆ ಹಾಡಿದರು. ಮಾಸ್ಟರ್ಸ್ ಕ್ಲಬ್ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಲೇಕಳ ಸ್ವಾಗತಿಸಿ, ಕ್ಲಬ್ ಸದಸ್ಯ ರಘುವೀರ್ ರಾವ್ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ರಾಜಾರಾಮ್ ರಾವ್ ಹಾಗೂ ಕಿರಣ್ ಭಟ್ ಚಂಡಿತೋಟ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದುಂಬಿ ಮೆಲೋಡೀಸ್ ಮಂಜೇಶ್ವರ ತಂಡದ ನೇತೃತ್ವದಲ್ಲಿ ಹೆಜ್ಜೆನಾದ ಹಾಗೂ ಪ್ರಸಿದ್ಧ ಹಿನ್ನಲೆ ಗಾಯಕರ ನೃತ್ಯಗಾನ ಕಾರ್ಯಕ್ರಮ, ಮಹಾಲಿಂಗೇಶ್ವರ ಮಕ್ಕಳ ಕುಣಿತ ಭಜನಾ ಕಾರ್ಯಕ್ರಮ, ಶ್ರೀ ಮಹಾಕಾಳಿ ಪ್ರಸಾದಿತ ತಂಡ ಮೀಯಪದವು ಇವರಿಂದ ಕೈ ಕೊಟ್ಟಿ ಕಳಿ ಹಾಗೂ ಕುಮಾರಿ ಶರಣ್ಯ ಕಳ್ಳಿಗೆ ಇವರಿಂದ ನೃತ್ಯ ಕಾರ್ಯಕ್ರಮ ಜರಗಿತು. ಬಳಿಕ ಕಾಪು ರಂಗತರಂಗ ಕಲಾವಿದರಿಂದ ಶೋಬಾಜಿ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.

.jpg)
.jpg)
