ಮಂಜೇಶ್ವರ: ಮಜಿಬೈಲು ಶ್ರೀ ವಿಷ್ಣು ಯಕ್ಷಬಳಗ ಕಲಾ ತಂಡದ ಶ್ರೀ ವಿಷ್ಣು ಯಕ್ಷ ವೈಭವ 2026 ಕಾರ್ಯಕ್ರಮವನ್ನು ಉದ್ಯಮಿ ಅಜಯ್ ಪಿ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿ ಶ್ರೀ ವಿಷ್ಣು ಯಕ್ಷ ವೈಭವಕ್ಕೆ ಶುಭ ಹಾರೈಸಿದರು. ಪ್ರೀತೇಶ ಶೆಟ್ಟಿ ವಿ, ಪೈವಳಿಕೆ ಬೆನಕ ಯಕ್ಷಕಲಾ ವೇದಿಕೆ ಸಂಚಾಲಕ ಹಾಗೂ ಹವ್ಯಾಸಿ ಕಲಾವಿದ, ಶಿಕ್ಷಕ ದೇವಕಾನ ಶ್ರೀಕೃಷ್ಣ ಭಟ್, . ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಕಡಂಬಾರು ಕ್ಷೇತ್ರದ ಆಡಳಿತ ಮೊಕ್ತೇಸರ ಸೂರ್ಯನಾರಾಯಣಯ್ಯ ಕಡಂಬಾರು ಉಪಸ್ಥಿತರಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದ, ಅರ್ಥಧಾರಿ ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರ್ವಹಿಸಿದರು.

.jpg)
