ತಿರುವನಂತಪುರಂ: ಸಚಿವ ಗಣೇಶ್ ಅವರ ಪತ್ನಿ ಬಿಂದು ಮೆನನ್ ಅವರು ಸಚಿವ ಗಣೇಶ್ ಅವರನ್ನು ಕೆಟ್ಟ ಪರಿಸ್ಥಿತಿಯಲ್ಲಿ ನೋಡಿದ್ದೇನೆ ಮತ್ತು ಸಚಿವರ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವಿವಾದಿತ ಹೇಳಿಕೆ ನಿಡಿದ್ದಾರೆ. ವಳಕಂನಲ್ಲಿರುವ ತಮ್ಮ ಮನೆಗೆ ಹೋದಾಗ ಹೇಳಲಾಗದ ಸ್ಥಿತಿಯಲ್ಲಿ ಸಚಿವರನ್ನು ನೋಡಿರುವುದಾಗಿ ಪತ್ನಿ ಮಾಧ್ಯಮವೊಂದಕ್ಕೆ ನಿನ್ನೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿರುವರು.
ಘಟನೆಯ ಪೊಟೋಗಳನ್ನು ತೆಗೆದಿರುವೆ. ಸಚಿವರ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದರು ಮತ್ತು ಸಹಾಯಕ್ಕಾಗಿ ಪೋಲೀಸರನ್ನು ಕರೆಸಲಾಗಿತ್ತು. ಅವರು ಕೇವಲ ನೋಟಕರಾಗಿದ್ದರು ಎಂದು ಬಿಂದು ಮೆನನ್ ಹೇಳಿದರು.
'ನಾನು ಯಾರಿಗೂ ಹೇಳದೆ ಮನೆಗೆ ಹೋದೆ. ನಾನು ಅಲ್ಲಿಗೆ ಹೋಗಿ ಬಾಗಿಲು ತೆರೆದಾಗ, ಮಲಗುವ ಕೋಣೆಯಲ್ಲಿ ಸಚಿವರು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿ ಇರುವುದನ್ನು ನಾನು ನೋಡಿದೆ. ಇದು ಹೇಳಲಾಗದ ವಿಷಯ. ನನ್ನ ಬಳಿ ಎಲ್ಲಾ ಪೋಟೋಗಳಿವೆ. ನಾನು ಹೊರಗೆ ಹೋಗಲು ಪ್ರಯತ್ನಿಸಿದಾಗ, ಸಚಿವರ ಸಿಬ್ಬಂದಿ ನನ್ನನ್ನು ತಡೆದರು. ಅವರು ನನ್ನ ಪೋೀನ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅವರು ನನ್ನನ್ನು ಮನೆಯಿಂದ ಹೊರಗೆ ಬಿಡದೆ ಬಾಗಿಲು ಮುಚ್ಚಿದರು. ನಾನು ಸಹಾಯಕ್ಕಾಗಿ ಕಿರುಚಿದೆ.
ಪೋಲೀಸರಿಗೆ ಕರೆ ಮಾಡಿದ ನಂತರ, ಮಹಿಳೆಯನ್ನು ಕಾರಿನಲ್ಲಿ ಕೂರಿಸಿ ಸಚಿವರು ಕಾಲ್ಕಿತ್ತರು. ಮಹಿಳೆ ಹೋದ ನಂತರ, ಗಣೇಶ್ ಕುಮಾರ್ ಕೋಣೆಗೆ ಪ್ರವೇಶಿಸಿ ಬಾಗಿಲು ಮುಚ್ಚಿದರು. "ಪೆÇಲೀಸರು ಏನೂ ಮಾಡಬೇಕಾಗಿಲ್ಲ ಎಂದು ಹೇಳಿ ಬಿಟ್ಟುಕೊಟ್ಟರು" ಎಂದು ಅವರ ಪತ್ನಿ ಬಿಂದು ಮೆನನ್ ಹೇಳಿದರು.

