HEALTH TIPS

ಸಂಸತ್ತಿನಲ್ಲಿ ಪಶ್ಚಿಮ ಏಷ್ಯಾ ಕುರಿತು ಚರ್ಚೆ: ಪ್ರಧಾನಿ ಹೊಸದೇನೂ ಹೇಳಿಲ್ಲ- ಪ್ರಿಯಾಂಕಾ ಗಾಂಧಿ

ನವದಹೆಲಿ: ಲೋಕಸಭೆಯಲ್ಲಿ ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯಲ್ಲಿ ಹೊಸದೇನನ್ನೂ ಹೇಳಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಮವಾರ ಪ್ರತಿಪಾದಿಸಿದ್ದು, ಈ ವಿಚಾರದಲ್ಲಿ ಸಂಸತ್ತಿನ ಚರ್ಚೆಯಲ್ಲಿ ಎಲ್ಲಾ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು ಎಂದಿದ್ದಾರೆ.

ಸಂಘರ್ಷದ ಸಮಯದಲ್ಲಿ ಭಾರತೀಯರ ಸುರಕ್ಷತೆಯು ಸರ್ಕಾರದ ಅತಿದೊಡ್ಡ ಆದ್ಯತೆಯಾಗಿದ್ದು ಕೇಂದ್ರ ಸರ್ಕಾರ ಜಾಗರೂಕವಾಗಿದೆ ಮತ್ತು ಎಲ್ಲ ನೆರವನ್ನು ನೀಡಲು ಸಿದ್ಧವಾಗಿದೆ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಾಗತಿಕ ಆರ್ಥಿಕತೆ ಮತ್ತು ಜನರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಪರಿಸ್ಥಿತಿ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸಂಸತ್ ಭವನದ ಹೊರಗೆ ಪ್ರಧಾನಿ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಅವರು ದೇಶಕ್ಕೆ ಪರಿಸ್ಥಿತಿಯನ್ನು ತಿಳಿಸಿದ್ದಾರೆ. ಹೊಸದನ್ನು ಹೇಳಲಿಲ್ಲ ಎಂದರು.

ನಾವು ಚರ್ಚೆಗೆ ನೋಟಿಸ್ ನೀಡಿದ್ದು, ಅದರಂತೆ ಚರ್ಚೆ ನಡೆಯಬೇಕು. ಅದರಿಂದ ನಾವು ಸಹ ಉತ್ತರಿಸಬಹುದು. ಎಲ್ಲಾ ಪಕ್ಷದವರು ತಮ್ಮ ಅಭಿಪ್ರಾಯ ಮಂಡಿಸಬಹುದು. ಸಂಸತ್ತಿನಲ್ಲಿ ಚರ್ಚೆ ನಡೆಯುವುದು ಒಳ್ಳೆಯದು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

ಇದಕ್ಕೂ ಮುನ್ನ ಸಂಸತ್ತಿನಲ್ಲಿ ಹೇಳಿಕೆ ನೀಡಿದ ಪ್ರಧಾನಿ, ಹಾರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆಯು ಯುದ್ಧದ ಆರಂಭದಿಂದಲೂ ಒಂದು ಸವಾಲಾಗಿತ್ತು. ಆದರೂ ಸರ್ಕಾರ ಅನಿಲ ಮತ್ತು ಇಂಧನ ಪೂರೈಕೆಯಲ್ಲಿ ಹೆಚ್ಚಿನ ಪರಿಣಾಮ ಬೀರದಂತೆ ಖಚಿತಪಡಿಸಿಕೊಳ್ಳುತ್ತಿದೆ ಎಂದು ಸದನಕ್ಕೆ ತಿಳಿಸಿದರು.

ಭಾರತವು ತನ್ನ ಎಲ್‌ಪಿಜಿ ಅಗತ್ಯತೆಯ ಶೇಕಡಾ 60 ರಷ್ಟು ಆಮದು ಮಾಡಿಕೊಳ್ಳುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅನಿಶ್ಚಿತ ಪೂರೈಕೆಯಿಂದಾಗಿ ಸರ್ಕಾರವು ದೇಶೀಯ ಪೂರೈಕೆಗೆ ಆದ್ಯತೆ ನೀಡುತ್ತಿದೆ. ದೇಶದಲ್ಲಿ ಎಲ್‌ಪಿಜಿ ಉತ್ಪಾದನೆಯನ್ನು ಸಹ ಹೆಚ್ಚಿಸಲಾಗುತ್ತಿದೆ. ಸಂಘರ್ಷವು ಆರ್ಥಿಕ, ಮಾನವೀಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತಹ ಅನಿರೀಕ್ಷಿತ ಸವಾಲುಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries