ಕಾಸರಗೋಡು: ನಗರದ ಅಮೈ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಏ.23ರಿಂದ 25ರ ವರೆಗೆ ನಡೆಯಲಿರುವ ಮಂದಿರದ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಒಡಿಯೂರು ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಗಳವರಿಗೆ ನೀಡಿ ಆಶೀರ್ವಾದ ಮಂತ್ರಾಕ್ಷತೆ ಪಡೆದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಡಾ. ಕೆ.ಎನ್. ವೆಂಕಟರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಗುಣಪಾಲ ಅಮೈ, ಕೋಶಾಧಿಕಾರಿ ವೇಣುಗೋಪಾಲ್, ಸಮಿತಿ ಕಾರ್ಯದಶಿಗಳಾದ ರಾಜೇಶ್ ಅಮೈ, ಕಿಶೋರ್ ಎಸ್.ವಿ.ಟಿ, ರಾಮಚಂದ್ರ ಅಮೈ, ಯೋಗೀಶ್ ಅಮೈ ಉಪಸ್ಥಿತರಿದ್ದರು.


