ಕಾಸರಗೋಡು: ಅಭಿವೃದ್ಧಿಗೆ ಎಲ್ಲಾ ಅನುಕೂಲ ಸೌಲಭ್ಯಗಳಿದ್ದರೂ, ಇದನ್ನು ಬಳಸಿಕೊಳ್ಳದೇ ಕೇರಳವನ್ನು ಹಿಂದುಳಿಯುಂವತೆ ಮಾಡುವ ಮೂಲಕ ರಾಜ್ಯದ ಎಡ ಹಾಗೂ ಐಕ್ಯ ರಂಗಗಳು ಮಲಯಾಳಿಗರನ್ನು ಅನಿವಾಸಿ ಪ್ರವಾಸಿಗರಾಗಿ ಉಳಿಯುವಂತೆ ಮಾಡಿರುವುದಾಗಿ ಮುಂಬಯಿ ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್ ತಿಳಿಸಿದ್ದಾರೆ.
ಅವರು ಕಾಸರಗೋಡಿನಲ್ಲಿ ಎನ್‍ಡಿಎ ಅಭ್ಯರ್ಥಿ ಅಶ್ವಿನಿ ಎಂ. ಎಲ್. ಅವರ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಕಾಸರಗೋಡು ಮಂಡಲ ಎನ್‍ಡಿಎ ಸಂಚಾಲಕ, ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಅಭ್ಯರ್ಥಿ ಎಂ. ಎಲ್. ಅಶ್ವಿನಿ, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ, ಕೋಯಿಕ್ಕೋಡ್ ವಲಯ ಕಾರ್ಯದರ್ಶಿ ಸುಧಾಮ ಗೋಸಾಡ, ಪನ್ವೇಲ್ ಮಹಾನಗರ ಪಾಲಿಕೆ ಕೌನ್ಸಿಲರ್ ಸಂತೋಷ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸವಿತ ಟೀಚರ್, ರಾಮಪ್ಪ ಮಂಜೇಶ್ವರ, ವೇಲಾಯುಧನ್, ಜಿಲ್ಲಾ ಉಪಾಧ್ಯಕ್ಷ ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಬದಿಯಡ್ಕ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎಂ, ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಶ್ರೀಧರ ಬೆಳ್ಳೂರು, ಕಾಸರಗೋಡು ಮಂಡಲಾಧ್ಯಕ್ಷ ಗುರು ಪ್ರಸಾದ ಪ್ರಭು, ಕಾರ್ಯದರ್ಶಿ ಶ್ರೀಧರ ಕೂಡ್ಲು, ಚಂದ್ರಶೇಖರ್ ಬಿ ಉಪಸ್ಥಿತರಿದ್ದರು. ಬಿಜೆಪಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಉಪಸ್ಥಿತರಿದ್ದರು.



