ಉಪ್ಪಳ: ಸಮಗ್ರ ಶಿಕ್ಷಣ ಕಾಸರಗೋಡು, ಬಿ.ಆರ್.ಸಿ ಮಂಜೇಶ್ವರದ ನೇತೃತ್ವದಲ್ಲಿ ಶಾಂತಿ ಮತ್ತು ಸಹೋದರತ್ವದಿಂದ ಕೂಡಿದ ಮಾನವ ಲೋಕ ಎಂಬ ಮಹತ್ತರ ಸಂದೇಶವನ್ನು ಉನ್ನತ ಮಟ್ಟದಲ್ಲಿ ಸಾರುತ್ತಾ ಇಫ್ತಾರ್ ಸಮಾರಂಭ ಮತ್ತು ಸಮೂಹ ಉಪವಾಸ ಮುಕ್ತಾಯ ುಪ್ಪಳದ ಬಿ.ಆರ್.ಸಿ.ಯಲ್ಲಿ ಆಯೋಜಿಸಲಾಯಿತು. ಧಾರ್ಮಿಕ ಸೌಹಾರ್ದತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸಿದ ಈ ಕಾರ್ಯಕ್ರಮವು ಅದರ ಸಂಘಟನಾ ಶ್ರೇಷ್ಠತೆ ಮತ್ತು ಸಾಂಸ್ಕøತಿಕ ವೈವಿಧ್ಯತೆಯಿಂದ ವಿಶೇಷ ಗಮನ ಸೆಳೆಯಿತು.
ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಇಬ್ರಾಹಿಂ ಬಿ. ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಜಾರ್ಜ್ ಕ್ರಾಸ್ಟಾ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದರು.
ಸಮಗ್ರ ಶಿಕ್ಷಣ ಕಾಸರಗೋಡು ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಪ್ರಕಾಶನ್ ಟಿ., ಅಗಸ್ಟಿಯನ್ ಬರ್ನಾರ್ಡ್, ಚೆರುವತ್ತೂರು ಬಿ.ಪಿ.ಸಿ ಸುಬ್ರಹ್ಮಣ್ಯನ್ ವಿ.ವಿ., ಹೊಸದುರ್ಗ ಬಿ.ಆರ್.ಸಿ ಬಿ.ಪಿ.ಸಿ ಸನಲ್ ವೆಳ್ಳುವ, ಚಿಟ್ಟಾರಿಕ್ಕಲ್ ಬಿ.ಪಿ.ಸಿ ಶೈಜು ಸಿ., ಬೇಕಲ್ ಬಿ.ಪಿ.ಸಿ ಅಬ್ದುಲ್ ಸಲಾಂ, ಕುಂಬಳೆ ಬಿ.ಪಿ.ಸಿ ಶೀನಾ ಪಿ., ಮುಳಿಂಜ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ, ಸಜೀಶ್ ಯು. ಉಪಸ್ಥಿತರಿದ್ದರು.
ಬಿ.ಆರ್.ಸಿ ಕಲಾವಿದರ ನೇತೃತ್ವದಲ್ಲಿ ವಿವಿಧ ಧರ್ಮಗಳ ಸೌಹಾರ್ದ ಸಂದೇಶಗಳನ್ನು ಒಳಗೊಂಡ ಹಾಡುಗಳನ್ನು ಹಾಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯನ್ನು ಚೈತನ್ಯಮಯಗೊಳಿಸಿ ಧರ್ಮಗಳನ್ನೂ ಮೀರಿ ಮಾನವ ಸಂಬಂಧಗಳ ಸೌಂದರ್ಯವನ್ನು ಪ್ರತಿಬಿಂಬಿಸಿತು.
ವಿಶೇಷ ಶಿಕ್ಷಕರು, ಕಚೇರಿ ಸಿಬ್ಬಂದಿ, ವಿಶೇಷ ಶಿಕ್ಷಣಗಾರರು ಹಾಗೂ ಸಿಆರ್.ಸಿ ಸಂಯೋಜಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಬಿ.ಪಿ.ಸಿ ಪಿ. ರಾಜಗೋಪಾಲನ್ ಸ್ವಾಗತಿಸಿ, ತರಬೇತುದಾರೆ ಸುಮಯ್ಯ ವಂದಿಸಿದರು.

.jpg)
.jpg)
