ತಿರುವನಂತಪುರಂ: :ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇರಳದ(Kerala) ರಾಜಕೀಯದಲ್ಲಿ 'ಕಾಂಗ್ರೆಸ್' ಹೆಸರಿನಲ್ಲಿರುವ ವಿವಿಧ ಪಕ್ಷಗಳೇ ಪ್ರಮುಖ ಗೊಂದಲವಾಗಿ ಪರಿಣಮಿಸಿದೆ. ಪ್ರಧಾನವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಒಂದಿದ್ದರೆ, ಸ್ಥಳೀಯವಾಗಿ ಕೇರಳ ಕಾಂಗ್ರೆಸ್ (Kerala Congress) ಎಂಬ ಹೆಸರಿನಲ್ಲಿಯೇ ಅನೇಕ ಪಕ್ಷಗಳಿವೆ.
ಇನ್ನು ಕೇರಳಲ್ಲಿ ಪ್ರಮುಖ ಪಕ್ಷಗಳಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF), ಜನತಾ ದಳ (ಜಾತ್ಯತೀತ), ಭಾರತೀಯ ಜನತಾ ಪಕ್ಷ (BJP), ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗಳಿಂದ ಪ್ರಾಬಲ್ಯ ಹೊಂದಿದೆ.
ಆದರೂ ಕೂಡಾ ಕಾಂಗ್ರೆಸ್ ಹೆಸರಿನಲ್ಲಿ ಹಲವಾರು ಸಣ್ಣ ಪಕ್ಷಗಳಿದ್ದು, ಇದು ಚುನಾವಣಾ ಫಲಿತಾಂಶ ಮತ್ತು ಸಮ್ಮಿಶ್ರ ಸರ್ಕಾರಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಕೇರಳದಲ್ಲಿರುವ ಕಾಂಗ್ರೆಸ್ ಹೆಸರಿನ ಪಕ್ಷಗಳು ಹೀಗಿವೆ:
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಯುಡಿಎಫ್)
ಕೇರಳ ಕಾಂಗ್ರೆಸ್ (ಎಂ) (ಎಲ್‌ಡಿಎಫ್)
ಕೇರಳ ಕಾಂಗ್ರೆಸ್ (ಜೋಸೆಫ್) (ಯುಡಿಎಫ್)
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (ಎಸ್‌ಪಿ) (ಎಲ್‌ಡಿಎಫ್)
ಕಾಂಗ್ರೆಸ್ (ಜಾತ್ಯತೀತ) (ಎಲ್‌ಡಿಎಫ್)
ಜನಾಧಿಪತ್ಯ ಕೇರಳ ಕಾಂಗ್ರೆಸ್ (LDF)
ಕೇರಳ ಕಾಂಗ್ರೆಸ್ (ಜಾಕೋಬ್) (ಯುಡಿಎಫ್)
ಕೇರಳ ಕಾಂಗ್ರೆಸ್ (B) (LDF)
ಕೇರಳ ವಿಧಾನಸಭಾ ಚುನಾವಣೆ 2026
2026 ರ ಕೇರಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 9 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ.
ರಾಜ್ಯದಲ್ಲಿ ಪ್ರಮುಖ ಚುನಾವಣಾ ಸ್ಪರ್ಧೆಯು ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೇತೃತ್ವದ ಯುಡಿಎಫ್ ನಡುವೆ ಪೈಪೋಟಿ ನಿರೀಕ್ಷಿಸಲಾಗಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಕೂಡ ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿದೆ.
ಕೇರಳ ರಾಜ್ಯದಲ್ಲಿ ಬಿಜೆಪಿ ನಾಯಕರು ಈಗಾಗಲೇ ದೊಡ್ಡ ಮಟ್ಟದಲ್ಲಿ ರಣತಂತ್ರ ರೂಪಿಸಿದ್ದು, ಈ ಬಾರಿಯ ಕೇರಳ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಗೆದ್ದೇ ಗೆಲ್ಲಬೇಕು ಎಂದು ಶಪಥ ಮಾಡಿದ್ದಾರೆ. ಹೀಗಿದ್ದಾಗ ಕಾಂಗ್ರೆಸ್ ಕೂಡ ಕೇರಳ ರಾಜ್ಯದ ಗೆಲುವಿಗೆ ಸರ್ಕಸ್ ಮಾಡಬೇಕಾಗಿ ಬಂದಿದ್ದು, ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತಿದೆ.

