ಕಾಸರಗೋಡು: ಆಲ್ ಕೇರಳ ಛಾಯಾಗ್ರಾಹಕರ ಸಂಘ ಪೂರ್ವ ಘಟಕ ವತಿಯಿಂದ ತನ್ನ ಸದಸ್ಯರಗೆ 2026-27ನೇ ಸಾಲಿನ ಗುರುತಿನ ಚೀಟಿ ವಿತರಣಾ ಸಮಾರಂಭ ಆಯೋಜಿಸಿತು. ಘಟಕದ ಅಧ್ಯಕ್ಷ ರಾಜಶೇಖರನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ನೂತನ ಸದಸ್ಯ ವಿನಾಯಕನ್ ಅವರಿಗೆ ಕಾಸರಗೋಡು ನ್ಯಾಚುರಲ್ ಕ್ಲಬ್ ಸಂಯೋಜಕ ದಿನೇಶ್ ಇನ್‍ಸೈಟ್ ಅವರು ಗುರುತಿನ ಚೀಟಿಯನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಇತರ ನೂತನ ಸದಸ್ಯರಾದ ವಿನೀತ್, ವರುಣ್ ರಾಜ್, ಸಮಿತಿ ಸದಸ್ಯರು ಅಜಿತ್ ಮತ್ತು ಅಶ್ವತಿ ಅವರಿಗೆ ಗುರುತಿನ ಚೀಟಿಗಳನ್ನು ವಿತರಿಸಿದರು. ರಾಜ್ಯ ಸಮಿತಿ ಸದಸ್ಯ ರಾಜೇಂದ್ರನ್, ಪ್ರಾದೇಶಿಕ ಘಟಕ ಅಧ್ಯಕ್ಷ ವಾಮನ್ ಕುಮಾರ್, ನೂತನ ಸದಸ್ಯರಾದ ವಿನೀತ್ ಮತ್ತು ಅಶ್ವತಿ, ಘಟಕದ ಹಿರಿಯ ಸದಸ್ಯ ಗೋವಿಂದನ್ ಚಂಕರಣಕಾಡ್, ಪ್ರಾದೇಶಿಕ ಸಮಿತಿ ಕೋಶಾಧಿಕಾರಿ ಅಜಿತ್ ಕುಮಾರ್, ಜತೆ ಕಾರ್ಯದರ್ಶಿ ಸುರೇಶ್ ಚಂದ್ರ ಮತ್ತು ಪಿಯೆರೊ ಮನೀಶ್ ಉಪಸ್ಥಿತರಿದ್ದರು. ಘಟಕ ಕೋಶಾಧಿಕಾರಿ ಶ್ರೀಕಾಂತ್ ವಂದಿಸಿದರು.



