HEALTH TIPS

28 ರಿಂದ ಆಚೇರಿ ಶ್ರೀ ಮಹಾವಿಷ್ಣು ದೇವಾಲಯದ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಕಾಸರಗೋಡು: ಉತ್ತರ ಮಲಬಾರಿನ ಪ್ರಸಿದ್ಧ ಮತ್ತು ಪ್ರಾಚೀನ ಉದುಮ ಆಚೇರಿ ಶ್ರೀ ಮಹಾವಿಷ್ಣು ದೇವಾಲಯದ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮಾರ್ಚ್ 28 ರಿಂದ ಏಪ್ರಿಲ್ 5ರ ವರೆಗೆ ಜರುಗಲಿದೆ.  ಬ್ರಹ್ಮಶ್ರೀ ಅರವತ್ ಕೆ.ಯು.ಪದ್ಮನಾಭ ತಂತ್ರಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.  ಮಾ. 28ರಂದು ಬೆಳಗ್ಗೆ 10ಕ್ಕೆ ಉದುಮ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ಸಂಜೆ 4.30ಕ್ಕೆ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಅರವತ್ ಕೆ.ಯು.ಪದ್ಮನಾಭ ತಂತ್ರಿ ಹಾಗೂ ಇತರ ತಂತ್ರಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಗುವುದು. 29ರಂದು ಬೆಳಗ್ಗೆ 10ಕ್ಕೆ ದೇವಸ್ಥಾನ ಮಾತೃ ಸಮಿತಿಯಿಂದ ಸದ್ಗ್ರಂಥ ಅಧ್ಯಯನ, ಭಜನೆ, ಕಥಕ್ಕಳಿ, 30ರಂದು ಲಲಿತಾ ಸಹಸ್ರನಾಮ ಪಾರಾಯಣ, ಸಂಜೆ 5ಕ್ಕೆ ಹಿಂದೂ ಐಕ್ಯ ವೇದಿಕೆರಾಜ್ಯ ಕಾರ್ಯದರ್ಶಿ ರಾಜೇಶ್ ನಾದಾಪುರ ಅವರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. 31ರಂದು ಬೆಳಗ್ಗೆ 5ಕ್ಕೆ ದೇವಾಲಯ ಉದ್ಘಾಟನೆ, ಸಂಜೆ 4ಕ್ಕೆ ಎಡನೀರು ಶ್ರೀ ಸಚ್ಚಿದನಂದ ಭಾರತೀ ಸ್ವಾಮೀಜಿ ನವೀಕರಣ ಮತ್ತು ನಿರ್ಮಾಣಕಾರ್ಯಗಳನ್ನು ಲೋಕಾರ್ಪಣೆಗೈದು ಆಶೀರ್ವಚನ ನೀಡುವರು. ಕಾರ್ಯಕ್ರಮದ ಅಂಗವಾಗಿ ಭಜನೆ, ಕೋಲ್ಕಲಿ ನಡೆಯುವುದು.

5ರಂದು ಬೆಳಗ್ಗೆ 4.30ಕ್ಕೆ 108 ತೆಂಗಿನಕಾಯಿ ಮಹಾ ಗಣಪತಿ ಹೋಮ, ಸಂಜೆ ತಾಯಂಬಕ, ಶ್ರೀ ಭೂತಬಲಿ, ಮೇಳಂ, ತಿಡಂಬ ನೃತ್ಯ ನಡೆಯುವುದು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries