ಕುಂಬಳೆ: ಬಾಲಕಿ ಮುಂದೆ ನಗ್ನತೆ ಪ್ರದರ್ಶಿಸಿದ ವಯನಾಡ್ ಕಲ್ಪೆಟ್ಟ ನಿವಾಸಿ, ಮಣಿಯಂಪಾರೆ ಸನಿಹದ ಶೇಣಿಯಲ್ಲಿ ವಾಸಿಸುತ್ತಿರುವ ಅದ್‍ನುಲ್ ಫಾರಿಸ್(22)ಎಂಬಾತನನ್ನು ಕುಂಬಳೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹನ್ನೆರಡರ ಹರೆಯದ ಬಾಲಕಿ ರಸ್ತೆಯಲ್ಲಿ ನಡದು ಹೋಗುವ ಮಧ್ಯೆ, ಕಾರಿನಲ್ಲಿ ಆಗಮಿಸಿದ ಆರೋಪಿ, ದಾರಿ ಕೇಳುವ ನೆಪದಲ್ಲಿ ಬಾಲಕಿ ಸನಿಹ ತೆರಳಿ, ನಗ್ನತೆ ಪ್ರದರ್ಶಿಸಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಸಮೀಪದ ಅಂಗಡಿಗೆ ಧಾವಿಸಿದ್ದು, ಅಂಗಡಿಯವರು ಪೊಲೀಸರಿಗೆ ನೀಡಿದ ದೂರಿನನ್ವಯ ಕಾರಿನ ನಂಬ್ರ ಕೇಂದ್ರೀಕರಿಸಿ ತಾಸುಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

