HEALTH TIPS

ತೆಲಂಗಾಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯ ಮೃತದೇಹ ಕಚ್ಚಿತಿಂದ ನಾಯಿ!

ಹೈದರಾಬಾದ್: ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ನಾಯಿಯೊಂದು ವ್ಯಕ್ತಿಯೊಬ್ಬರ ದೇಹದ ಭಾಗವನ್ನು ಕಚ್ಚಿ ಎಳೆದಾಡಿದೆ. ಆಘಾತಕಾರಿ ಘಟನೆಗೆ ಕಾರಣರಾದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.

ನದಿಯಲ್ಲಿ ಮುಳುಗಿ ಮೃತಪಟ್ಟಿದ್ದ ವ್ಯಕ್ತಿಯ ಶವವನ್ನು ಸೋಮವಾರ ಬೆಳಿಗ್ಗೆ ಜಿಲ್ಲೆಯ ಜಡ್ಚೆರ್ಲಾ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹಕ್ಕೆ ಬಾಯಿ ಹಾಕಿ ಕಚ್ಚುತ್ತಿದ್ದ ನಾಯಿಯನ್ನು ಕಂಡ ವಾರ್ಡನ್, ಅದನ್ನು ಓಡಿಸಿದ್ದರು. ಆದರೆ, ನಾಯಿಯು ನೆಲದ ಮೇಲೆ ಬಿದ್ದಿದ್ದ ಮೃತದೇಹದ ಭಾಗವನ್ನು ಕಚ್ಚಿಕೊಂಡು ಹೋಗಿದೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.

ಮೃತದೇಹವು ಊದಿಕೊಂಡಿದ್ದರಿಂದ ಶವಾಗಾರದೊಳಗಿನ ಫ್ರೀಜರ್‌ಗೆ ಹೊಂದಿಕೊಳ್ಳಲಿಲ್ಲ. ಹಾಗಾಗಿ ನೆಲದ ಮೇಲೆಯೇ ಇಡಲಾಗಿತ್ತು ಎಂದು ವಾರ್ಡನ್ ಹೇಳಿದ್ದಾರೆ.

ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ಸಿ.ದಾಮೋದರ್ ರಾಜನರಸಿಂಹ, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ರಾಜ್ಯ ವೈದ್ಯ ವಿಧಾನಪರಿಷತ್ ಆಯುಕ್ತ ಅಜಯ್ ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ.

ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಆಸ್ಪತ್ರೆಯ ಸೂಪರಿಂಟೆಂಡೆಂಟ್, ಕರ್ತವ್ಯದಲ್ಲಿದ್ದ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ (ಆರ್‌ಎಂಒ), ಇತರೆ ವೈದ್ಯರೊಬ್ಬರು ಸೇರಿದಂತೆ ಶವಾಗಾರದ ಸಹಾಯಕ ಸಿಬ್ಬಂದಿಯನ್ನು (ಎಂಎನ್‌ಒ) ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries