ಉಪ್ಪಳ: ಯುವಕನನ್ನು ಹಾದಿಮಧ್ಯೆ ತಡೆದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಲ್ಪಾಡಿ ಗ್ರಾಪಂ ಸದಸ್ಯ ಸೇರಿದಂತೆ ನಾಲ್ವರ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಇಚ್ಲಂಗೋಡು ವೀರನಗರ ಅಡ್ಕ ನಿವಾಸಿ ಪ್ರೀತಂ ಎಂಬವರ ದೂರಿನ ಮೇರೆಗೆ ಮಂಗಲ್ಪಾಡಿ ಗ್ರಾಪಂ 14ನೇ ವಾರ್ಡು ಮುಸ್ಲಿಂ ಲೀಗ್ ಸದಸ್ಯ ಅಪೋಲೋ ಉಮ್ಮರ್ ಸೇರಿದಂತೆ ನಾಲ್ಕು ಮಂದಿ ವಿರುದ್ಧ ಈ ಕೇಸು. ಮಾ. 16ರಂದು ಬಂದ್ಯೋಡು ಸಪ್ಲೈಕೋ ಕಚೇರಿ ಶೌಚಗೃಹದ ವಠಾರದಲ್ಲಿ ಆರೋಪಿಗಳು ತನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಪ್ರೀತಂ ದೂರಿನಲ್ಲಿ ತಿಳಿಸಿದ್ದಾರೆ.

