ಕಾಸರಗೋಡು: ನಗರದ ಕೋಟೆಕಣಿ ನಿವಾಸಿ, ಕ್ಯಾಂಪ್ಕೋ ಮಾಜಿ ನಿರ್ದೇಶಕ, ಕಾಸರಗೊಡು ನಗರಸಭಾ ಮಾಜಿ ಸದಸ್ಯ ದಿ. ಗಣಪತಿ ಕೋಟೆಕಣಿ ಅವರ ಪತ್ನಿ ಪುಷ್ಪಾವತೀ ಸಿ.ಎಚ್(78)ಮಂಗಳವಾರ ಸವಗೃಹದಲ್ಲಿ ನಿಧನರಾದರು. ಕರ್ನಾಟಕ ಸರ್ಕಾರದ ಕುಟುಂಬ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಪುತ್ರಿ, ಇಬ್ಬರು ಪುತ್ರರಾದ ಕಾಸರಗೋಡು ನಗರಸಭಾ ಮಾಜಿ ಸದಸ್ಯ ವರಪ್ರಸಾದ್ ಕೋಟೆಕಣಿ, ರಾಮನಾಥ ಭವನ ಸಮಿತಿಯ ಗುರುಪ್ರಸಾದ್ ಕೋಟೆಕಣಿ ಸೇರಿದಂತೆ ಬಂಧುಮಿತ್ರರನ್ನು ಅಗಲಿದ್ದಾರೆ.


