ಕಾಸರಗೋಡು: ಕಡಪ್ಪುರ ಶ್ರೀ ಕುರುಂಬಾ ಭಗವತೀ ದೇವಸ್ಥಾನದಲ್ಲಿ ಭರಣೀ ಮಹೋತ್ಸವಕ್ಕಾಗಿ ಬುಧವಾರ ಧ್ವಜಾರೋಹಣ ನಡೆಯಿತು. ಪರಂಪರಾಗತ ಸುಡುಮದ್ದು ಸೇವೆಯೊಂದಿಗೆ ಧ್ವಜಾರೋಹಣ ನೆರವೇರಿತು. ದೇವಸ್ಥಾನದ ಅಚ್ಚಮಾರರು, ದೇವಾಲಯ ಸಮಿತಿ ಪದಾಧಿಕಾರಿಗಳು, ಭಕ್ತಾದಿಗಳು ಪಾಲ್ಗೊಂಡಿದ್ದರು.
ದುಡಿ ತಾಳ, ಪೂಜಾಕ್ರಿಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು. 19ರಂದು ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ತಿರುವಾದಿರ, ಕೈಕೊಟ್ಟುಕಳಿ, 20ರಂದು ಮೆಗಾ ಶೋ, 21ರಂದು ಹಸಿರುವಾಣಿ ಕಾಣಿಕೆ ಸಮರ್ಪಣೆ, 22ರಂದು ಭರಣಿ ಮಹೋತ್ಸವ, ಭರಣೀಅವಭೃತ ಸ್ನಾನ, ಧ್ವಜಾವರೋಹಣ ನಡೆಯುವುದು.

