ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ ಮಾ. 19ರಿಂದ 23ರ ವೆಗೆ ಜರುಗಲಿದೆ. ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು. ಮಾ. 19ರಂದು ಬೆಳಗ್ಗೆ 5.30ಕ್ಕೆ ಗಣಪತಿ ಹವನ, 9ಕ್ಕೆ ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ, 10.45ಕ್ಕೆ ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ ನಡೆಯುವುದು. ಪ್ರತಿದಿನ ಶ್ರೀದೇವರ ಉತ್ಸವ ಬಲಿ, ಭಜನೆ, ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು.
22ರಂದು ಬೆಳಗ್ಗೆ 7ಕ್ಕೆ ಉಷ:ಪೂಜೆ, ಉತ್ಸವಬಲಿ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಕರಂದಕ್ಕಾಡು ಬೆಡಿಕಟ್ಟೆಯಲ್ಲಿ ವಿಶೇಷ ಪೂಜೆ, ಉತ್ಸವ, ಶ್ರೀದೇವರ ಶಯನ ನಡೆಯುವುದು. 23ರಂದು ಬೆಳಗ್ಗೆ ಶಯನೋದ್ಘಾಟನೆ, ಸಂಜೆ 6ಕ್ಕೆ ತಾಯಂಬಕ, ರಾತ್ರಿ 8.30ಕ್ಕೆ ಪೂಜೆ, ಉತ್ಸವಬಲಿ, ಕಟ್ಟೆಪೂಜೆ, ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಸಾದ, ಧ್ವಜಾವರೋಹಣ, ರಾತ್ರಿ 9.30ಕ್ಕೆ ಸಾಂಸ್ಕøತಿಕ ಕಲಾವೈಭವ ನಡೆಯುವುದು.
ಮಾ. 28ರಂದು ಸಂಜೆ ಶ್ರೀಕ್ಷೇತ್ರದಲ್ಲಿ ಶ್ರೀರಕ್ತೇಶ್ವರೀ ನೇಮ ಮತ್ತು ರಆಥ್ರಿ ಗುಳಿಗ ಕೋಲ ನಡೆಯುವುದು.

