ಬದಿಯಡ್ಕ: ವಿದೇಶಿ ಮದ್ಯ ಹಾಗೂ ಸಾರಾಯಿ ತಯಾರಿಗಾಗಿ ತಯಾರಿಸಿಡಲಾಗಿದ್ದ ಹುಳಿರಸ ವಶಪಡಿಸಿಕೊಂಡಿರುವ ಅಬಕಾರಿ ದಳ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಫ್ತಿಯ ಕನ್ಯಪ್ಪಾಡಿ ನಿವಾಸಿ ಜಿ.ಕೆ ಸಂತೋಷ್ ಹಾಗೂ ಬಾಡೂರು ನೈಮುಗೇರು ನಿವಸಿ ಸೀತಾರಾಂ ರೈ ಬಂಧಿತರು.
ಬದಿಯಡ್ಕ ರೇಂಜ್ ಅಧಿಕಾರಿಗಳು ಗೋಳಿಯಡ್ಕದಲ್ಲಿ ನಡೆದಿ ಕಾರ್ಯಾಚರಣೆಯಲ್ಲಿ ಸಾರಾಯಿ ತಯಾರಿಸಲು ಸಂಗ್ರಹಿಡಲಾಗಿದ್ದ 50ಲೀ. ಹುಳಿರಸ ವಶಪಡಿಸಿಕೊಂಡು, ಜಿ.ಕೆ ಸಂತೋಷ್‍ನನ್ನು ಬಂಧಿಸಿದ್ದಾರೆ. ನಂತರ ಹುಳಿರಸ ನಾಶಪಡಿಸಲಯಿತು.
ಇನ್ನೊಂದು ಪ್ರಕರಣದಲ್ಲಿ ಕುಂಬಳೆ ರೇಂಜ್ ಅಬಕಾರಿ ದಳ ಅಧಿಕಾರಿಗಳು ಬಾಡೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 3.78ಲೀ. ಕರ್ನಾಟಕ ನಿರ್ಮಿತ ವಿದೇಶಿಮದ್ಯ ವಶಪಡಿಸಿಕೊಂಡು ಸೀತರಾಮ ರೈಯನ್ನು ಬಂಧಿಸಿದ್ದಾರೆ.

