ಕೊಚ್ಚಿ: ಉಷಾ ಜೋಸೆಫ್ ಕುಟ್ಟಿ ಅವರ ಹೊಟ್ಟೆಯಲ್ಲಿ ಸಿಲುಕಿಕೊಂಡಿದ್ದ ಕತ್ತರಿ (ಅಪಧಮನಿ ಫೆÇೀರ್ಸೆಪ್ಸ್) ಶಸ್ತ್ರಿಕ್ರಿಯೆ ನಡೆಸಿ ತೆಗೆದ ನಂತರ ಆಸ್ಪತ್ರೆಯಿಂದ ನಿನ್ನೆ ನಿರ್ಗಮಿಸಿದರು. ಉಷಾ ಅವರ ಶಸ್ತ್ರಚಿಕಿತ್ಸೆಯನ್ನು ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಅಮೃತಾನಂದಮಯಿ ಮಠವು ಉಷಾ ಅವರ ಚಿಕಿತ್ಸೆಯನ್ನು ವಹಿಸಿಕೊಂಡು ನಡೆಸಿತು.
ಶಸ್ತ್ರಚಿಕಿತ್ಸೆಯ ನೇತೃತ್ವವನ್ನು ಅಮೃತ ಆಸ್ಪತ್ರೆಯ ಗ್ಯಾಸ್ಟ್ರೋಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಒ.ವಿ. ಸುಧೀರ್, ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ.ವಿ. ಸಂಜೀವನ್ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ. ರಾಧಾಮಣಿ ಕೆ. ವಹಿಸಿದ್ದರು. ಶಸ್ತ್ರಚಿಕಿತ್ಸೆಯ ನಂತರ, ಉಷಾ ಅವರ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ವೈದ್ಯರು ಹೇಳಿದರು.
ಐದು ವರ್ಷಗಳ ಹಿಂದೆ, ಆಲಪ್ಪುಳ ಟಿ.ಡಿ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಗರ್ಭಾಶಯದ ಗಡ್ಡೆ ತೆಗೆಯಲು ಶಸ್ತ್ರಚಿಕಿತ್ಸೆ ನಡೆಸಿದ್ದ ವೇಳೆ ಉಷಾ ಅವರ ಹೊಟ್ಟೆಯಲ್ಲಿ ಕತ್ತರಿ ಬಾಕಿಯಾಗಿತ್ತು. ನಂತರ, ಉಷಾ ನೋವು ಮತ್ತು ಇತರ ವಿಷಯಗಳೊಂದಿಗೆ ಶೋಚನೀಯ ಜೀವನವನ್ನು ನಡೆಸುತ್ತಿದ್ದರು. ಈ ತಿಂಗಳ 19 ರಂದು ಉಷಾ ಅವರನ್ನು ಕೆ.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ಸಂಸದ ಕೆ.ಸಿ.ವೇಣುಗೋಪಾಲ್ ಮಧ್ಯಪ್ರವೇಶಿಸಿ ಅವರನ್ನು ಅಮೃತ ಆಸ್ಪತ್ರೆಗೆ ದಾಖಲಿಸಿದ್ದರು.

