HEALTH TIPS

ಹೊರ್ಮುಜ್ ಜಲಸಂಧಿ ಸಮೀಪ ಇರಾನ್ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ ಬಾಂಬ್ ದಾಳಿ

 ವಾಷಿಂಗ್ಟನ್: ಹೊರ್ಮುಜ್ ಜಲಸಂಧಿಯ ಸಮೀಪದಲ್ಲಿರುವ ಇರಾನ್ ಕ್ಷಿಪಣಿ ತಾಣಗಳನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆ ಹೇಳಿದೆ. 


ಹೊರ್ಮುಜ್ ಜಲಸಂಧಿಯಲ್ಲಿ ಸಂಪೂರ್ಣ ನಿಯಂತ್ರಣ ಸಾಧಿಸುತ್ತೇವೆ. ಅದಕ್ಕಾಗಿ ಹೆಚ್ಚಿನ ಸಮಯ ಬೇಕಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಬೆನ್ನಲ್ಲೇ ಈ ದಾಳಿ ನಡೆದಿದೆ.

'ಕೆಲವು ಗಂಟೆಗಳ ಹಿಂದೆ ಹೊರ್ಮುಜ್ ಜಲಸಂಧಿಯ ಸಮೀಪ ಇರಾನ್ ಕರಾವಳಿಯಲ್ಲಿ ಕ್ಷಿಪಣಿ ತಾಣಗಳನ್ನು ಗುರಿಯಾಗಿ ಬಾಂಬ್ ದಾಳಿ ನಡೆಸಲಾಗಿದೆ' ಎಂದು ಅಮೆರಿಕದ ಸೆಂಟ್ರೆಲ್ ಕಮಾಂಡ್ ತಿಳಿಸಿದೆ.

'ಬರೋಬ್ಬರಿ 5,000 ಪೌಂಡ್ (2,268 ಕೆ.ಜಿ) 'ಬಂಕರ್ ಬಸ್ಟರ್' ಬಾಂಬ್‌ಗಳನ್ನು ಬಳಸಿ ಹೊಡೆದುರುಳಿಸಲಾಗಿದೆ' ಎಂದು ಹೇಳಿದೆ.

'ಹೊರ್ಮುಜ್ ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗುಗಳ ಸಂಚಾರಕ್ಕೆ ಇರಾನ್‌ನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಅಪಾಯಕಾರಿಯಾಗಿವೆ' ಎಂದೂ ಉಲ್ಲೇಖಿಸಿದೆ.

ಯುದ್ಧದ ಬೆನ್ನಲ್ಲೇ ಹೊರ್ಮುಜ್ ಜಲಸಂಧಿ ನಿಯಂತ್ರಣ ಸಾಧಿಸಿರುವ ಇರಾನ್, ಅಂತರರಾಷ್ಟ್ರೀಯ ಇಂಧನ ಪೂರೈಕೆಯ ಸಾಗರ ಹಾದಿಯನ್ನು ಮುಚ್ಚಿತ್ತು. ಇದರಿಂದಾಗಿ ಹಲವು ರಾಷ್ಟ್ರಗಳಿಗೆ ಇಂಧನ ಸಾಗಿಸಲು ಬಿಕ್ಕಟ್ಟು ಎದುರಾಗಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries