ಲಂಡನ್: ಭಾರತಕ್ಕೆ ಹಸ್ತಾಂತರ ಮಾಡದಂತೆ ಕೋರಿ ತಾವು ಸಲ್ಲಿಸಿರುವ ಮನವಿಯ ಮರು ವಿಚಾರಣೆ ನಡೆಸಬೇಕು ಎಂದು ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಸಾವಿರಾರು ಕೋಟಿ ವಂಚಿಸಿದ ಹಾಗೂ ಹಣದ ಅಕ್ರಮ ಹಣ ವರ್ಗಾವಣೆ ನಡೆಸಿದ ಪ್ರಕರಣದದಲ್ಲಿ ಬ್ರಿಟನ್ ಜೈಲಿನಲ್ಲಿರುವ ನೀರವ್, ತಮ್ಮನ್ನು ಭಾರತಕ್ಕೆ ಹಸ್ತಾಂತರ ಮಾಡದಂತೆ ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್ ಹೈಕೋರ್ಟ್ ರದ್ದುಪಡಿಸಿತ್ತು.
ನೀರವ್ ಮೋದಿ ಭಾರತಕ್ಕೆ ಹಸ್ತಾಂತರಿಸಲು ಲಂಡನ್ ಹೈಕೋರ್ಟ್ ಆದೇಶಮಲ್ಯ, ನೀರವ್ ಮೋದಿ ಹಸ್ತಾಂತರಕ್ಕೆ ಭಾರತ ಒತ್ತಾಯ: ಸ್ಟಾರ್ಮರ್, ಮೋದಿ ಮಾತುಕತೆ
ಆದಾಗ್ಯೂ ಕಾನೂನು ಹೋರಾಟ ಮುಂದುವರಿಸಿದ್ದಾರೆ. ಜೈಲಿನಿಂದ ವಿಡಿಯೊ ಕಾನ್ಫರೆನ್ಫ್ ಮೂಲಕ ವಿಚಾರಣೆಗೆ ಹಾಜರಾದ ನೀರವ್, 'ಭಾರತದ ತನಿಖಾ ಸಂಸ್ಥೆಗಳು ವಿಚಾರಣೆ ನೆಪದಲ್ಲಿ ಕಿರುಕುಳ ನೀಡುವ ಸಾಧ್ಯತೆ ಇದೆ' ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.
'ಈ ಪ್ರಕರಣವು ನೀರವ್ ಮತ್ತು ಭಾರತದಿಂದ ಬಂದಿರುವ ಅಧಿಕಾರಿಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಶೀಘ್ರದಲ್ಲೇ ತೀರ್ಪು ಪ್ರಕಟಿಸಲಾಗುವುದು' ಎಂದು ನ್ಯಾ. ಜೆರೆಮಿ ಸ್ಟುವರ್ಟ್ ಸ್ಮಿತ್ ಅವರು ಮಂಗಳವಾರ ನಡೆದ ವಿಚಾರಣೆ ವೇಳೆ ಹೇಳಿದ್ದಾರೆ.

