ಕಾಸರಗೋಡು: ಕೇರಳ ರಾಜ್ಯಾದ್ಯಂತ ಎಸ್ಸೆಸೆಲ್ಸಿ ಮತ್ತು ಹ್ಯಯರ್ ಸೆಕೆಂಡರಿ ಪ್ಲಸ್‍ವನ್ ತರಗತಿ ಪರೀಕ್ಷೆ ಮಾ. 5ರಂದು ಆರಂಭಗೊಳ್ಳಲಿದೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 11497ಮಂದಿ ಹಾಗೂ ಹೊಸದುರ್ಗ ಶೈಕ್ಷಣಿಕ ಜಿಲ್ಲೆಯಲ್ಲಿ 9197ಮಂದಿ ಪರೀಕ್ಷೆ ಬರೆಯಲಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 22ಮಂದಿ ಖಾಸಗಿಯಾಗಿಹೆಸರು ನೋಂದಾಯಿಸಿದ್ದರೆ, 11475ಮಂದಿ ರೆಗ್ಯುಲರ್ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಇವರಲ್ಲಿ5988ಮಂದಿ ಬಾಲಕರು ಹಾಗೂ 5487ಮಂದಿ ಬಾಲಕಿಯರಾಗಿದ್ದಾರೆ. 46ಸರ್ಕಾರಿ ಶಾಲೆ, 19ಅನುದಾನಿತ ಶಾಲೆಗಳಲ್ಲಿ ಪರೀಕ್ಷೆ ನಡೆಯಲಿದೆ.ಜಿಲ್ಲೆಯಲ್ಲಿ ನಾಯಮರ್‍ಮೂಲೆ ಟಿಐಎಚ್‍ಎಸ್‍ಎಸ್‍ನಲ್ಲಿ ಅತೀ ಹೆಚ್ಚು ಅಂದರೆ 785ಮಂದಿ ವಿದ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರೆ, ಮೂಡಂಬೈಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಕಡಿಮೆ ಅಂದರೆ 17ಮಂದಿ ಪರೀಕ್ಷೆ ಬರೆಯಲಿದ್ದಾರೆ. ಚೆರ್ಕಳದ ಮಾರ್ತೋಮ ವಿಶೇಷ ಶಾಲೆಯಲ್ಲಿ 14ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಹೊಸದುರ್ಗ ಶ್ರೀಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 79ಕೇಂದ್ರಗಳಲ್ಲಿ 4484ಮಂದಿ ಬಾಲಕಿಯರು ಸೇರಿದಂತೆ ಒಟ್ಟು 9197ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪ್ಲಸ್‍ವನ್ ತರಗತಿ ಪರೀಕ್ಷೆ ಮಾ. 5ರಂದು ಆರಂಭಗೊಳ್ಳಲಿದ್ದು, 101 ಕೇಂದ್ರಗಳಲ್ಲಿ16952ಮಂದಿ ರೆಗ್ಯುಲರ್ ಹಾಗೂ ಓಪನ್ ವಿಭಾಗದಲ್ಲಿ 138ಸೇರಿದಂತೆ 18334ಮಂದಿ ಪರೀಕ್ಷೆ ಬರೆಯಲಿದ್ದಾರೆ. ಪ್ಲಸ್‍ಟು ಪರೀಕ್ಷೆ ಮಾ. 6ರಿಂದ ಆರಂಭಗೊಳ್ಳಲಿದೆ. ರೆಗ್ಯುಲರ್ ವಿಭಾಗದಲ್ಲಿ 179445ಮಂದಿ, ಓಪನ್ ವಿಭಾಗದಲ್ಲಿ 1784ಮಂದಿ ಸೇರಿದಂತೆ 19693ಮಂದಿ ಪರೀಕ್ಷೆ ಬರೆಯಲಿದ್ದಾರೆ. ಮಾರ್ಚ್ 28ಕ್ಕೆ ಪರೀಕ್ಷೆ ಕೊನೆಗೊಳ್ಳಲಿದೆ.

