HEALTH TIPS

ಕಾಸರಗೋಡಿನ ಡಾ. ಚೇತನಾಗೆ ಜಾಗತಿಕ ಗೌರವ-ಹ್ಯಾಲೆಟ್ ಪ್ರೈಜ್ ಮೆಡಲ್ ಪ್ರಶಸ್ತಿ

ಕಾಸರಗೋಡು: ಕಾಸರಗೋಡು ಸಮೀಪದ ಮೇಲ್ಪರಂಬ ನಿವಾಸಿ ಡಾ. ಚೇತನಾ ಸಿ.ಎಸ್. ಅವರು ಎಂ.ಆರ್.ಸಿ.ಎಸ್. (ಇ.ಎನ್.ಟಿ) ಪರೀಕ್ಷೆಯಲ್ಲಿ ಶೇ. 92 ಅಂಕಗಳನ್ನು ಗಳಿಸಿ ಜಾಗತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಇಂಗ್ಲೆಂಡಿನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ವತಿಯಿಂದ ಪ್ರದಾನವಾಗುವ ಹ್ಯಾಲೆಟ್ ಪ್ರೈಜ್ ಮೆಡಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 


ಮಾರ್ಚ್ 26 ರಂದು ಲಂಡನ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ಸರ್ಜನ್‍ಗಳಿಗೆ ಜಾಗತಿಕ ಮಟ್ಟದಲ್ಲಿ ನೀಡಲಾಗುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿ, ಎಂ.ಆರ್.ಸಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಅಗ್ರ ಪ್ರತಿಭಾವಂತರಿಗೆ ಮಾತ್ರವೇ ನೀಡಲಾಗುತ್ತದೆ. ಈ ಬಾರಿ ಡಾ. ಚೇತನಾ ಅವರು ಶೇ. 92 ಅಂಕಗಳೊಂದಿಗೆ ವಿಶಿಷ್ಟ ಸಾಧನೆ ಮಾಡಿರುವುದು ಗಮನಾರ್ಹ. ಭಾರತದಲ್ಲಿ ಈ ಗೌರವಕ್ಕೆ ಪಾತ್ರರಾದ ವೈದ್ಯರುಗಳ ಸಂಖ್ಯೆ ಅತ್ಯಲ್ಪವಾಗಿದೆ.

ಪ್ರಸ್ತುತ ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಇ.ಎನ್.ಟಿ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಯೆನೆಪೆÇೀಯ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪೆÇ್ರಫೆಸರ್ ಹಾಗೂ ಮನೋವೈದ್ಯರಾದ ಡಾ. ಶಾಶ್ವತ್ ಸತ್ಯನಾಥ್ ಅವರ ಧರ್ಮಪತ್ನಿ. ದಂಪತಿಗೆ ಅನುಷ್ಕಾ ಎಂಬ ಪುತ್ರಿ ಇದ್ದಾಳೆ.

ಡಾ. ಚೇತನಾ ಅವರು ಕಾಸರಗೋಡಿನ ಕಳನಾಡು ನರ್ಸಿಂಗ್ ಹೋಂನ ಡಾ. ಎಂ. ಸತ್ಯನಾಥ್ ಮತ್ತು ಡಾ. ಗೀತಾ ಸತ್ಯನಾಥ್ ಅವರ ಸೊಸೆಯಾಗಿದ್ದು, ಉಜಿರೆಯ ಪ್ರೊ. ಶಿವರಾವ್ ಹಾಗೂ ಜಾಹ್ನವಿ ದಂಪತಿಯ ಪುತ್ರಿಯಾಗಿದ್ದಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅಪ್ರತಿಮ ಸಾಧನೆಯ ಮೂಲಕ ಡಾ. ಚೇತನಾ ಅವರು ಕಾಸರಗೋಡು ಹಾಗೂ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ಇವರ ಈ ಅತ್ಯುನ್ನತ ಸಾಧನೆಗೆ ಕಾಸರಗೋಡು ಹಾಗೂ ಮಂಗಳೂರಿನ ಐಎಂಎ ಸಹಿತ ನೂರಾರು ಸಂಘಟನೆಗಳು ಅಭಿನಂದನೆ ಸಲ್ಲಿಸಿವೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries