HEALTH TIPS

ನೆತನ್ಯಾಹು ಬದುಕಿದ್ದರಾ.. ಮೃತಪಟ್ಟಿದ್ದಾರಾ?. ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಚರ್ಚೆ

 ಇರಾನ್ ವಿರುದ್ಧ ಅಮರಿಕ, ಇಸ್ರೇಲ್ ಯುದ್ಧ ಆರಂಭವಾದಾಗಿನಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ, ನೆತನ್ಯಾಹು ಮೃತಪಟ್ಟಿರುವ ಬಗ್ಗೆ ವದಂತಿಗಳು ಜೋರಾಗಿ ಹಬ್ಬುತ್ತಿವೆ. ಅಲ್ಲದೆ, ತಾವು ಬದುಕಿರುವುದನ್ನು ಖಚಿತಪಡಿಸಲು ಅವರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿರುವ ವಿಡಿಯೊಗಳಲ್ಲೂ ಅನುಮಾನಾಸ್ಪದ ಅಂಶ ಕಂಡುಬಂದಿದೆ. 


ಹೌದು, ನೆತನ್ಯಾಹು ಬಿಡುಗಡೆ ಮಾಡಿರುವ ಒಂದು ವಿಡಿಯೊದಲ್ಲಿ ಅವರಿಗೆ ಆರು ಬೆರಳಿರುವಂತೆ ತೋರುತ್ತಿದೆ. ಮತ್ತೊಂದು ವಿಡಿಯೊದಲ್ಲಿ ಎಡಗೈ ಬೆರಳಿನ ಉಂಗುರ ಕೆಲ ಸಮಯದ ಬಳಿಕ ಮಾಯವಾಗುತ್ತದೆ. ಇವೆಲ್ಲವೂ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಇವು ಡೀಪ್‌ಫೇಕ್ ವಿಡಿಯೊಗಳು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇಸ್ರೇಲ್ ಭದ್ರತಾ ಕ್ಯಾಬಿನೆಟ್ ಸಭೆಗಳಿಗೆ ನೆತನ್ಯಾಹು ಅನುಪಸ್ಥಿತಿಯು ಅವರ ಸಾವಿನ ವದಂತಿಗೆ ಪುಷ್ಠಿ ನೀಡಿದೆ.

ಇರಾನ್ ಸಂಘರ್ಷದ ಮಧ್ಯೆ ಬೀಬಿ (ನೆತನ್ಯಾಹು ಅವರನ್ನು ಪ್ರೀತಿಯಿಂದ ಕರೆಯಲಾಗುತ್ತದೆ) ಸಾವಿಗೀಡಾಗಿದ್ದಾರೆ ಅಥವಾ ತೀವ್ರವಾಗಿ ಗಾಯಗೊಂಡಿದ್ದಾರೆ ಎಂಬ ತೀವ್ರವಾದ ವದಂತಿಗಳಿವೆ. ಕಳೆದ ವಾರದಿಂದ, ನೆತನ್ಯಾಹು ಯಾವುದೇ ನೇರ ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ, ಅವರ ಸಾವಿನ ವದಂತಿಗಳನ್ನು ತಳ್ಳಿಹಾಕಲು ಇಸ್ರೇಲ್ ಬಿಡುಗಡೆ ಮಾಡಿದ ವಿಡಿಯೊಗಳನ್ನು ಸೂಕ್ಷ್ಮವಾಗಿ ವಿಶ್ಕೇಷಿಸಲಾಗುತ್ತಿದ್ದು, ನೆತನ್ಯಾಹು ಮೃತಪಟ್ಟಿದ್ದಾರೋ ಅಥವಾ ಜೀವಂತವಾಗಿದ್ದಾರೋ ಎಂಬುದು ಸಾಮಾಜಿಕ ಮಾಧ್ಯಮಗಳ ಬಳಕೆದಾರರ ಪ್ರಮುಖ ಚರ್ಚೆಯ ವಿಷಯವಾಗಿದೆ.

ನೆತನ್ಯಾಹು ಅವರ ಮಗ ಯೈರ್ ನೆತನ್ಯಾಹು ಅವರು ಎಕ್ಸ್‌ನಲ್ಲಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮೌನವಹಿಸಿರುವುದು ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಸಾಮಾನ್ಯವಾಗಿ ದಿನಕ್ಕೆ ಸುಮಾರು 30-35 ಬಾರಿ ಪೋಸ್ಟ್ ಮಾಡುತ್ತಿದ್ದ 'ಟ್ವಿಟರ್ ವ್ಯಸನಿ' ಯೈರ್ ಅವರ ಎಕ್ಸ್ ಖಾತೆ ಮಾರ್ಚ್ 9ರಿಂದ ಸ್ತಬ್ಧವಾಗಿದೆ.

ಅಲ್ಲದೆ, ಟ್ರಂಪ್ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಲು ಅಮೆರಿಕ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಲೈವ್ ಸಂದರ್ಶನದಿಂದ ಹಠಾತ್ತನೆ ತೆರಳಿದ್ದು, ಅವರು ಗದ್ಗದಿತರಾದಂತೆ ಕಂಡುಬಂದ ವಿಡಿಯೊಗಳು ಹರಿದಾಡುತ್ತಿವೆ. ಇದು, ನೆತನ್ಯಾಹು ಸಾವಿನ ವದಂತಿಗೆ ಮತ್ತಷ್ಟು ಇಂಬು ನೀಡಿವೆ.

ನೆತನ್ಯಾಹು ಬದುಕಿದ್ದಾರಾ?

ಮಾರ್ಚ್ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಿದ್ದವು. ಅದಾದ ಬಳಿಕ, ಇರಾನ್ ಪ್ರತಿ ದಾಳಿ ನಡೆಸಿತ್ತು. ಈ ಸಂದರ್ಭ ದಾಳಿ ನಡೆದ ಕೆಲ ಪ್ರದೇಶಗಳಿಗೆ ನೆತನ್ಯಾಹು ಭೇಟಿ ನೀಡಿದ್ದರು. ಬಳಿಕ, ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮಾರ್ಚ್ 12ರಂದು ವಿಡಿಯೊ ಲಿಂಕ್ ಮೂಲಕ ಮಾಧ್ಯಮ ಗೋಷ್ಠಿ ನಡೆಸಲಾಗಿತ್ತು. ಬಿಡುಗಡೆಯಾದ ವಿಡಿಯೊವನ್ನು ಎಐ ವಿಡಿಯೊ ಎಂದಿರುವ ನೆಟ್ಟಿಗರು, ನೆತನ್ಯಾಹು ಅವರ ಎಡಗೈ ವಿರೂಪಗೊಂಡಂತೆ ಕಾಣುತ್ತದೆ, ಆರು ಬೆರಳುಗಳು ಇದ್ದಂತೆ ಕಾಣುತ್ತಿದೆ ಎಂದೂ ಕೆಲವರು ಕಾಮೆಂಟ್ ಹಾಕಿದ್ದಾರೆ.

ಎಐ ಮನುಷ್ಯನ ಸಂಪೂರ್ಣ ಪ್ರತಿಕೃತಿಯನ್ನು ಸೃಜಿಸುವಲ್ಲಿ ಸೋಲುತ್ತಿವೆ. ಹಾಗಾಗಿ, ಲೋಪ ಕಂಡುಬರುತ್ತಿದೆ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.

ವ್ಯಾಪಕವಾಗಿ ಹರಿದಾಡುತ್ತಿರುವ ಪತ್ರಿಕಾಗೋಷ್ಠಿಯ ಮತ್ತೊಂದು ವಿಡಿಯೊದಲ್ಲಿ, ನೆತನ್ಯಾಹು ಅವರ ಕಿರುಬೆರಳಿನ ಬಳಿ ಹೆಚ್ಚುವರಿ ಮಾಂಸ ಕಾಣಿಸಿಕೊಂಡಿದ್ದು, ಬಳಕೆದಾರರು ಇದನ್ನು 'ಕ್ಲಾಸಿಕ್ ಂI ಬೆರಳಿನ ದೋಷ' ಎಂದು ಕರೆದಿದ್ದಾರೆ.

ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್‌ನಲ್ಲಿ ತುರ್ತು ಸುರಕ್ಷತಾ ನಿರ್ಬಂಧಗಳು ಜಾರಿಯಲ್ಲಿವೆ. ಇಂತಹ ಸಂದರ್ಭಗಳಲ್ಲಿ ಎಐನಿಂದ ರಚಿಸಿದ ಅಥವಾ ಸಿಂಥೆಟಿಕ್ ಚಿತ್ರಗಳನ್ನು ಸರ್ಕಾರ ಬಳಸುತ್ತದೆ ಎಂದು ಕೆಲ ಸಾಮಾಜಿಕ ಮಾಧ್ಯಮ ಬಳಕೆದಾರರು ಮತ್ತು ಪರಿಣಿತರು ಹೇಳಿದ್ದಾರೆ.

ಕಾಫಿ ಶಾಪ್ ವಿಡಿಯೊ

ನೆತನ್ಯಾಹು ಕೈಬೆರಳುಗಳ ಬಗ್ಗೆ ವದಂತಿ ಹಬ್ಬುತ್ತಿದ್ದಂತೆ ಮಾರ್ಚ್ 15ರಂದು ಜೆರುಸಲೆಮ್ ಕಾಫಿ ಶಾಪ್‌ನ ವಿಡಿಯೊವೊಂದನ್ನು ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿತ್ತು. ತಮ್ಮ ಸಾವಿನ ಕುರಿತಂತೆ ಕೆಲ ಮಾಧ್ಯಮಗಳ ವರದಿ ಬಗ್ಗೆ ವಿಡಿಯೊದಲ್ಲಿ ಮಾತನಾಡಿದ್ದ ನೆತನ್ಯಾಹು, ಹೌದು ನಾನು ಕಾಫಿಗಾಗಿ ಸಾಯುತ್ತಿದ್ದೇನೆ ಎಂದು ಹೇಳಿದ್ದರು. ಅಲ್ಲದೆ, ಎರಡೂ ಕೈ ಬೆರಳುಗಳನ್ನು ತೋರಿಸಿ, ಎರಡರಲ್ಲೂ ಐದು ಬೆರಳು ಪ್ರದರ್ಶಿಸಿದ್ದರು. ವದಂತಿ ಅಲ್ಲಗಳೆಯಲು ಹಾಕಿದ ಈ ವಿಡಿಯೊ ಮತ್ತಷ್ಟು ವದಂತಿಗೆ ಕಾರಣವಾಗಿತ್ತು. ಎಕ್ಸ್‌ನ ಎಐ ಚಾಟ್‌ಬಾಟ್ ಗ್ರೋಕ್ ಸಹ ಈ ವಿಡಿಯೊ '100% ಡೀಪ್‌ಫೇಕ್' ಎಂದು ಹೇಳಿತ್ತು. ಈ ತರಹದ ಜಾಗವೇ ಜೆರುಸಲೆಮ್‌ನಲ್ಲಿ ಇಲ್ಲ ಎಂದಿತ್ತು.

ನೆತನ್ಯಾಹು ಹಿಡಿದಿದ್ದ ಕಾಫಿ ಕಪ್ ಗುರುತ್ವಾಕರ್ಷಣೆಯನ್ನು ಮೀರಿ ಓರೆಯಾಗುತ್ತಿರುವಂತೆ ಕಂಡುಬಂದಿದೆ ಎಂದು ಬಳಕೆದಾರರೊಬ್ಬರು ಹೇಳಿದ್ದರು. ಇದರ ಬೆನ್ನಲ್ಲೇ ಕಾಫಿ ಶಾಪ್ ಕೌಂಟರ್ ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಪ್ರಧಾನಿ ನೆತನ್ಯಾಹು ಮತ್ತು ಅವರ ಕಚೇರಿ ಸಿಬ್ಬಂದಿಗೆ ಆತಿಥ್ಯ ವಹಿಸಿದ್ದು ಅತ್ಯಂತ ಸಂತೋಷವಾಗಿದೆ ಎಂದು ಕೆಫೆ ಪೋಸ್ಟ್‌ನಲ್ಲಿ ತಿಳಿಸಿತ್ತು. ವದಂತಿ ಹಬ್ಬಿದ ಬೆನ್ನಲ್ಲೇ ಅದನ್ನು ಅಲ್ಲಗಳೆಯುವ ತೀವ್ರ ಪ್ರಯತ್ನ ನಡೆಯುತ್ತಿರುವುದೂ ಸಂಶಯಕ್ಕೆ ಕಾರಣವಾಗಿದೆ.

ನೆತನ್ಯಾಹು ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಕಂಡುಬಂದಿರುವ ಒಳಾಂಗಣ ವಿನ್ಯಾಸವು ಕೆಫೆಯ ವಿನ್ಯಾಸವನ್ನು ಹೋಲುತ್ತಿದೆ ಎಂದು ಮತ್ತೆ ಕೆಲವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಎಐ ವಿಡಿಯೊ ಎಂಬ ವದಂತಿ ತಡೆಯುವಲ್ಲಿ ಮತ್ತೊಂದು ವಿಡಿಯೊ ವಿಫಲ

ಈ ಚರ್ಚೆಗಳ ನಡುವೆ ನೆತನ್ಯಾಹು ಅವರು ಜೆರುಸಲೆಮ್‌ನ ಬೀದಿಯಲ್ಲಿ ನಡೆದಾಡುತ್ತಾ ನಾಗರಿಕರ ಜೊತೆ ಮಾತನಾಡುತ್ತಿದ್ದ ವಿಡಿಯೊವನ್ನೂ ಬಿಡುಗಡೆ ಮಾಡಲಾಗಿದೆ. ಅದರ ಬಗ್ಗೆಯೂ ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದು, ಅವರ ತೋಳು ಚಲಿಸಿದಂತೆ ಬೆರಳಿನಲ್ಲಿರುವ ಉಂಗುರವು ಮಾಯವಾದಂತೆ ಗೋಚರಿಸುತ್ತಿದೆ ಎಂದಿದ್ದಾರೆ.

'ನೆತನ್ಯಾಹು ತೋಳು ಚಲಿಸುವಾಗ ಅವರ ಉಂಗುರ ಏಕೆ ಕಣ್ಮರೆಯಾಗುತ್ತದೆ... ಇದು ಕೂಡ ಎಐ ವಿಡಿಯೊ ಆಗಿದೆಯೇ???'ಎಂದು ಎಕ್ಸ್‌ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.

ಜನಪ್ರಿಯ ಬ್ರಿಟಿಷ್-ಅಮೆರಿಕನ್ ಪತ್ರಕರ್ತ ಮೆಹದಿ ಹಸನ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. 'ನಾನು ಪಿತೂರಿ ಸಿದ್ಧಾಂತವನ್ನು ಬೆಂಬಲಿಸುವ ವ್ಯಕ್ತಿಯಾಗಲು ಬಯಸುವುದಿಲ್ಲ. ನೆತನ್ಯಾಹು ಸತ್ತಿದ್ದಾರೆ ಎಂಬ ಎಲ್ಲ ಸುದ್ದಿಗಳನ್ನು ನಾನು ವಿರೋಧಿಸಿದ್ದೇನೆ. ಆದರೆ, ಈ ವಿಡಿಯೊ ನಿಜಕ್ಕೂ ನಕಲಿಯಂತೆ ಕಾಣುತ್ತದೆ'ಎಂದು ಹೇಳಿದ್ದಾರೆ.

ಜನಪ್ರಿಯ ಟಿಕ್‌ಟಾಕರ್ ಮಾರ್ಕ್ ಲೆವಿನ್ ಸಹ ವಿಡಿಯೊ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ವಿಡಿಯೊ ಜೊತೆಗಿನ ಶೀರ್ಷಿಕೆಯು ಅವರ ಕೈಗಳ ಚಲನೆಯ ಲೋಪ ಮುಚ್ಚಿಡಲೆಂದೇ ಹಾಕಿದಂತಿದೆ. ಧ್ವನಿಯು ಎಐನಿಂದ ಸೃಜಿಸಿದಂತಿದೆ ಎಂದು ಹೇಳಿದ್ದಾರೆ.

ಈ ನಡುವೆ, ಭಾರತದಲ್ಲಿರುವ ಇಸ್ರೇಲ್ ರಾಯಭಾರಿ ರೆಯುವೆನ್ ಅಜರ್, ಪ್ರಧಾನಿ ಬದುಕಿದ್ದಾರೆ. ಮಿಲಿಟರಿ ಕಾರ್ಯತಂತ್ರ ಮತ್ತು ಚರ್ಚೆಯಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಇಷ್ಟು ದೊಡ್ಡ ಯುದ್ಧ ನಡೆಯುತ್ತಿರುವಾಗ ನೆತನ್ಯಾಹು ಅದು ಹೇಗೆ ಪ್ರಶಾಂತವಾಗಿ ಕೂರಲು ಸಾಧ್ಯ? ಕೇವಲ ಸಭೆಗಳಲ್ಲೇ ಕಾಲಕಳೆಯುವರೇ? ಎಂಬ ಪ್ರಶ್ನೆ ಮೂಡಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries