HEALTH TIPS

ಕದನವಿರಾಮ ಪ್ರಸ್ತಾವ ತಿರಸ್ಕರಿಸಿದ ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ

ಟೆಹರಾನ್: ಉದ್ವಿಗ್ನತೆ ಶಮನಗೊಳಿಸಬೇಕು ಅಥವಾ ಅಮೆರಿಕದೊಂದಿಗೆ ಕದನವಿರಾಮ ಒಪ್ಪಂದ ಮಾಡಿಕೊಳ್ಳುವಂತೆ ಮುಂದಿಟ್ಟಿದ್ದ ಪ್ರಸ್ತಾವವನ್ನು ಇರಾನ್‌ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ತಿರಸ್ಕರಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಎರಡು ರಾಷ್ಟ್ರಗಳು ಈ ಪ್ರಸ್ತಾವ ಮುಂದಿಟ್ಟಿದ್ದವು.

'ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತಿಕಾರದ ನಿರ್ಧಾರ ಅಚಲ ಎಂಬುದಾಗಿ ಮೊಜ್ತಬಾ ಅವರು ವಿದೇಶಾಂಗ ನೀತಿಗಳ ಅಧಿವೇಶನದಲ್ಲಿ ಹೇಳಿದ್ದಾರೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿವೇಶನಕ್ಕೆ ಮೊಜ್ತಬಾ ಅವರು ಖುದ್ದಾಗಿ ಹಾಜರಾಗಿದ್ದಾರೆಯೇ ಎಂಬ ಬಗ್ಗೆ ಅವರು ಸ್ಪಷ್ಟಪಡಿಸಿಲ್ಲ.

'ಅಮೆರಿಕ ಮತ್ತು ಇಸ್ರೇಲ್ ಮಂಡಿಯೂರಿ ಕ್ಷಮೆಯಾಚಿಸಿ, ಪರಿಹಾರ ನೀಡುವವರೆಗೂ ಶಾಂತಿ ಸ್ಥಾಪನೆಗೆ ಕಾಲ ಕೂಡಿ ಬರುವುದಿಲ್ಲ' ಎಂದು ಮೊಜ್ತಬಾ ಹೇಳಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇರಾನ್‌ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಮಾತುಕತೆ ಆರಂಭಿಸುವಂತೆ ಪಶ್ಚಿಮ ಏಷ್ಯಾದ ರಾಷ್ಟ್ರಗಳು ಮಾಡಿದ್ದ ಪ್ರಸ್ತಾವವನ್ನು ಅಮೆರಿಕ ನಿರಾಕರಿಸಿತ್ತು ಎಂದು ಮೂಲಗಳು ಶನಿವಾರ ತಿಳಿಸಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries