HEALTH TIPS

ಅಮೆರಿಕ, ಯುರೋಪ್‌ ನಲ್ಲಿ 'ನೋ ಕಿಂಗ್ಸ್' ಪ್ರತಿಭಟನೆ: ಟ್ರಂಪ್ ವಿರುದ್ಧ ಬೀದಿಗಿಳಿದ ಲಕ್ಷಾಂತರ ಜನ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ವಿರೋಧಿಸಿ 'ನೋ ಕಿಂಗ್ಸ್' ಹೆಸರಿನಲ್ಲಿ ಅಮೆರಿಕ ಹಾಗೂ ಯುರೋಪ್‌ ನಾದ್ಯಂತ ಶನಿವಾರ ಭಾರೀ ಪ್ರತಿಭಟನೆಗಳು ನಡೆದವು. ಲಕ್ಷಾಂತರ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು.

ಇರಾನ್‌ ನಲ್ಲಿನ ಯುದ್ಧ ಪರಿಸ್ಥಿತಿ, ಕಠಿಣ ವಲಸೆ ಜಾರಿ ಕ್ರಮಗಳು ಹಾಗೂ ಸಾಮಾಜಿಕ ಹಕ್ಕುಗಳನ್ನು ಮುಂದಿಟ್ಟುಕೊಂಡು ಹಲವು ನಗರಗಳಲ್ಲಿ ಜನರು ಮೆರವಣಿಗೆ ನಡೆಸಿದರು.

ಮಿನ್ನೇಸೋಟ ರಾಜ್ಯದ ಸೇಂಟ್ ಪಾಲ್‌ನ ಕ್ಯಾಪಿಟಲ್ ಪ್ರದೇಶದಲ್ಲಿ ನಡೆದ ಪ್ರಮುಖ ರ‍್ಯಾಲಿ ದೇಶವ್ಯಾಪಿ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಗಾಯಕ ಬ್ರೂಸ್ ಸ್ಪ್ರಿಂಗ್‌ಸ್ಟೀನ್ ಭಾಗವಹಿಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು. ಫೆಡರಲ್ ಏಜೆಂಟ್‌ಗ ಳ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥವಾಗಿ ಹಾಡು ಹಾಡಿದ ಅವರು, "ಇದು ಇನ್ನೂ ಅಮೆರಿಕ ಎಂಬುದನ್ನು ನಿಮ್ಮ ಹೋರಾಟ ತೋರಿಸಿದೆ" ಎಂದು ಹೇಳಿದರು.

ನ್ಯೂಯಾರ್ಕ್‌ನಂತಹ ಮಹಾನಗರಗಳಿಂದ ಹಿಡಿದು ಐಡಹೋ ರಾಜ್ಯದ ಸಣ್ಣ ಪಟ್ಟಣಗಳವರೆಗೆ ಜನರು ಪ್ರತಿಭಟನೆ ನಡೆಸಿದರು. ದೇಶದ ಎಲ್ಲಾ 50 ರಾಜ್ಯಗಳಲ್ಲಿ 3,100 ಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಈ ಬಾರಿ ಸುಮಾರು 9 ಮಿಲಿಯನ್ ಜನರು ಭಾಗವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾನ್ಸಾಸ್‌ನ ಟೊಪೆಕಾದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರತಿಭಟನಾಕಾರರು ವ್ಯಂಗ್ಯಾತ್ಮಕ ಪ್ರದರ್ಶನಗಳ ಮೂಲಕ ಟ್ರಂಪ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. "ಕ್ಯಾಟ್ಸ್ ಅಗೇನ್ಸ್ಟ್ ಟ್ರಂಪ್" ಸೇರಿದಂತೆ ವಿವಿಧ ಘೋಷಣೆಗಳ ಫಲಕಗಳು ಗಮನ ಸೆಳೆದವು.

ಇದಕ್ಕೆ ಪ್ರತಿಕ್ರಿಯಿಸಿದ ಶ್ವೇತಭವನ, ಈ ಪ್ರತಿಭಟನೆಗಳನ್ನು "ಎಡಪಂಥೀಯರ ಪ್ರೇರಿತ" ಎಂದು ಟೀಕಿಸಿದೆ. ರಿಪಬ್ಲಿಕನ್ ನಾಯಕರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾಕಾರರು ವಲಸೆ ನೀತಿ, ಇರಾನ್ ಯುದ್ಧ, ಟ್ರಾನ್ಸ್‌ ಜೆಂಡರ್ ಹಕ್ಕುಗಳ ಹಿನ್ನಡೆ ಹಾಗೂ ಆರ್ಥಿಕ ಅಸಮಾನತೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟಿದ್ದಾರೆ. ವಾಷಿಂಗ್ಟನ್‌ ನಲ್ಲಿ ಲಿಂಕನ್ ಸ್ಮಾರಕದ ಬಳಿ ನಡೆದ ಮೆರವಣಿಗೆಯಲ್ಲಿ "No kings" ಎಂಬ ಘೋಷಣೆಗಳು ಮೊಳಗಿದವು.

ಸ್ಯಾನ್ ಡಿಯಾಗೋದಲ್ಲಿ ಸುಮಾರು 40,000 ಜನರು ಭಾಗವಹಿಸಿದರೆ, ನ್ಯೂಯಾರ್ಕ್‌ ನಲ್ಲಿ ನಾಗರಿಕ ಹಕ್ಕುಗಳ ಸಂಘಟನೆಗಳು ಸರ್ಕಾರದ ವಿರುದ್ಧ ಕಿಡಿಕಾರಿದವು.

ಅಮೆರಿಕದ ಹೊರಗೂ ಲಂಡನ್, ಪ್ಯಾರಿಸ್ ಮತ್ತು ರೋಮ್ ನಗರಗಳಲ್ಲಿ ಸಾವಿರಾರು ಜನರು ಯುದ್ಧ ವಿರೋಧಿ ಘೋಷಣೆಗಳನ್ನು ಕೂಗಿದರು.

"ಲಕ್ಷಾಂತರ ಜನರ ಧ್ವನಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ" ಎಂದು ಅಮೆರಿಕನ್ ಫೆಡರೇಶನ್ ಆಫ್ ಟೀಚರ್ಸ್ ಅಧ್ಯಕ್ಷೆ ರಾಂಡಿ ವೀನ್‌ಗಾರ್ಟನ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries